For Quick Alerts
  ALLOW NOTIFICATIONS  
  For Daily Alerts

  'ಅಪ್ಪು ಪಪ್ಪು'ಗೆ ಪರೀಕ್ಷೆ ರಜಾ ಘೋಷಣೆ

  By Rajendra
  |

  ಸೌಂದರ್ಯ ಜಗದೀಶ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಾಲಿವುಡ್ ಶೈಲಿಯ ಅಪರೂಪದ ಚಿತ್ರ 'ಅಪ್ಪು ಪಪ್ಪು' ಚಿತ್ರೀಕರಣಕ್ಕೆ ಇದೀಗ ರಜಾ ಕೊಡಲಾಗಿದೆ. ಕಾರಣವಿಷ್ಟೆ - ನಿರ್ಮಾಪಕ ಸೌಂದರ್ಯ ಜಗದೀಶ್‌ರ ಪುತ್ರ ಮಾ.ಸ್ನೇಹಿತ್‌ಗೆ ಇದೀಗ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಮುಗಿದ ನಂತರ ಚಿತ್ರೀಕರಣವನ್ನು ಮುಂದುವರೆಸುವುದಾಗಿ ನಿರ್ದೇಶಕ ಆರ್.ಅನಂತರಾಜು ತಿಳಿಸಿದ್ದಾರೆ.

  ಅಪ್ಪು ಪಾತ್ರ ನಿರ್ವಹಿಸಿರುವ ಮಾ. ಸ್ನೇಹಿತ್‌ಗೆ ಪರೀಕ್ಷೆ ಮುಗಿದು ರಜಾ ಪ್ರಾರಂಭವಾದ ಕೂಡಲೇ ಅಪ್ಪು-ಪಪ್ಪು ಚಿತ್ರೀಕರಣ ಪ್ರಾರಂಭವಾಗಲಿದೆ. ಕಾಂಬೋಡಿಯಾದ ಓರಂಗಟಾನ್ ಎಂಬ ಚಿಂಪಾಂಜಿ ಈ ಚಿತ್ರದಲ್ಲಿ ಅಪ್ಪು ಸ್ನೇಹಿತ ಪಪ್ಪು ಪಾತ್ರ ನಿರ್ವಹಿಸಿದ್ದು ಕಾಂಬೋಡಿಯಾದಲ್ಲೇ 35 ದಿನಗಳ ಕಾಲ ಚಿಂಪಾಂಜಿಯ ಭಾಗದ ಶೂಟ್ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಇದೀಗ ಬೆಂಗಳೂರು ಸುತ್ತಮುತ್ತ ಉಳಿದ ಭಾಗದ ಚಿತ್ರೀಕರಣ ನಡೆಸುತ್ತಿದೆ.

  ವಿಜಯ್ ಕಿರಣ್ ಹಾಗೂ ಸೌಂದರ್ಯ ಜಗದೀಶ್ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಸ್.ಕೃಷ್ಣರ ಛಾಯಾಗ್ರಹಣ, ಹಂಸಲೇಖಾರ ಸಂಗೀತ, ರಾಮ್‌ನಾರಾಯಣ್‌ರ ಸಾಹಿತ್ಯ ಇದೆ. ಅಬ್ಬಾಸ್, ರಂಗಾಯಣ ರಘು, ಕೋಮಲ್, ಜೆನೀಫರ್, ರೇಖಾ ಪ್ರಮುಖ ತಾರಾಗಣದಲ್ಲಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X