»   » ಮಮತಾ ಮೋಹನ್ ದಾಸ್ ಮನ ಬಿಚ್ಚಿದಾಗ!

ಮಮತಾ ಮೋಹನ್ ದಾಸ್ ಮನ ಬಿಚ್ಚಿದಾಗ!

Subscribe to Filmibeat Kannada
Mamata Mohandas
ಒಬ್ಬ ನಟಿ ಹಾಗೂ ಒಬ್ಬ ಗಾಯಕಿ ಇವರಿಬ್ಬರನ್ನೂ ಒಬ್ಬರಲ್ಲೇ ನೋಡಬಹುದು. ಇವೆರಡೂ ಮುಖಗಳ ಒಂದೇ ನಾಣ್ಯ ಮಮತಾ ಮೋಹನ್ ದಾಸ್. ಗೂಳಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾದ ಮಲೆಯಾಳಿ ಮಲ್ಲು ಈಗ ದಕ್ಷಿಣ ಭಾರತದಲ್ಲಿ ಬಿಡುವಿಲ್ಲದ ನಟಿ. ಬಹರೈನ್ ನಲ್ಲಿ ಹುಟ್ಟಿ, ಬೆಳೆದ ಈಕೆ ಮಲೆಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಲು ಬೇಡಿಕೆಯಲ್ಲಿದ್ದಾರೆ. ಈಕೆ ಬಾಲಿವುಡ್ ಗೆ ಜಿಗಿಯುವ ದಿನಗಳು ದೂರದಲ್ಲಿಲ್ಲ. ಪ್ರೀತಿ, ಪ್ರೇಮ, ಮದುವೆ, ಕನಸು, ಗುಸುಗುಸು ಬಗ್ಗೆ ಆಕೆ ಕೊಟ್ಟ ಚುಟುಕು ಉತ್ತರಗಳು ಸುಮ್ಮನೆ ಹಾಗೆ!

ಪ್ರೀತಿ ಪ್ರೇಮ, ಮದುವೆ:
ನನ್ನ ಮದುವೆ ಶೇ.99ರಷ್ಟು ತಂದೆ ತಾಯಿಯ ಇಷ್ಟ ಪಡುವ ಹುಡುಗನೊಂದಿಗೆ ನಡೆಯುತ್ತದೆ. ಈಗಲೆ ಮದುವೆ ಇಲ್ಲ. ಇನ್ನೂ ಐದು ವರ್ಷ ಆಗಬಹುದು!

ಸೌಂದರ್ಯ, ಗ್ಲಾಮರ್: ಗ್ಲಾಮರಸ್ ಆಗಿ ಇರುವವರೆಲ್ಲಾ ಸುಂದರಿಯರಲ್ಲ. ಬಟ್ಟೆ, ಸೌಂದರ್ಯವರ್ಧಕಗಳು ಗ್ಲಾಮರನ್ನು ಕೊಡಬಹುದು ಆದರೆ ಸೌಂದರ್ಯವನ್ನು ಕೊಡಲಾರವು. ಆತ್ಮಸೌಂದರ್ಯವೇ ನಿಜವಾದ ಸೌಂದರ್ಯ.

ಸೋಲು,ಗೆಲುವು: ಸಿನಿಮಾ ಮುಗ್ಗರಿಸಿದರೆ ನಾಯಕಿ ಫ್ಲಾಪ್ ಎನ್ನುತ್ತಾರೆ ಬಹಳಷ್ಟು ಮಂದಿ. ಅದೇ ಚಿತ್ರ ಗೆದ್ದರೆ ಅದು ಟೀಂ ವರ್ಕ್ ಆಗುತ್ತದೆ. ಸೋಲಾಗಲಿ, ಗೆಲುವಾಗಲಿ ಅದರಲ್ಲಿ ಎಲ್ಲರೂ ಭಾಗಿಗಳೆ.

ಗುಸುಗುಸು, ಪ್ರಚಾರ: ನನ್ನ ಬಗ್ಗೆ ಗುಸುಗುಸು ಸ್ವಲ್ಪ ಕಡಿಮೆ ಎಂದೇ ತಿಳಿದುಕೊಳ್ಳುತ್ತೇನೆ. ನಿಮಗೆ ಗೊತ್ತೇ ಇದೆ, ಈ ದಿನಗಳಲ್ಲಿ ಎಷ್ಟು ವದಂತಿಗಳು ಹುಟ್ಟಿಕೊಂಡರೆ ಅಷ್ಟು ಬಿಟ್ಟಿ ಪ್ರಚಾರ ಸಿಗುತ್ತದೆ. ಹಾಗಾಗಿಯೇ ನನಗೆ ಪ್ರಚಾರದಬೆಲೆಗೊತ್ತಾಗಿಲ್ಲ!

ಅಭಿಮಾನಿ, ಪ್ರೇಮಿಗಳು: ನನ್ನ ಅಭಿಮಾನಿಗಳು ತುಂಬ ಒಳ್ಳೆಯವರು. 'ಐ ಲವ್ ಯು' ಎಂದು ಹಿಂದೆ ಬೀಳುವುದಿಲ್ಲ. ಒಂದು ವೇಳೆ ಯಾರಾದರೂ ಪ್ರೊಪೋಸ್ ಮಾಡಿದರು ಎಂದಿಟ್ಟುಕೊಳ್ಳಿ....ನಾನು ಮತ್ತೆ ಬಹರೈನ್ ನಲ್ಲಿ ಸೆಟ್ಲ್ ಆಗುತ್ತೇನೆ. ನನ್ನೊಂದಿಗೆ ಬಹರೈನ್ ಗೆ ಬರುತ್ತೀರಾ ಎಂದು ಕೇಳುತ್ತೇನೆ.

ಕನಸು, ಗುರಿಗಳು:
ಸ್ಕೂಬಾ ಡೈವಿಂಗ್ ಕಲಿಯಬೇಕು ಎಂಬುದು ದೊಡ್ಡ ಆಸೆ. ಹಿಂದಿಯ 'ಬ್ಲ್ಯಾಕ್' ಚಿತ್ರದಲ್ಲಿ ರಾಣಿ ಮುಖರ್ಜಿ ಮಾಡಿದಂತಹ ಪಾತ್ರವನ್ನು ನಾನೂ ಮಾಡಬೇಕೆಂಬಕನಸಿದೆ. ಉತ್ತಮ ಗಾಯಕಿಯಾಗಿ ಹೆಸರು ಮಾಡಬೇಕು ಎಂಬ ಗುರಿಯೂ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಜೂನಿಯರ್ ತ್ರಿಶಾ ಕುರಿತು ಹಾಗೆ ಸುಮ್ಮನೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada