»   »  ಸೀನ ಚಿತ್ರಕ್ಕಾಗಿ ರು.4 ಲಕ್ಷದ ದಾಖಲೆ ಭಿತ್ತಿಪತ್ರ

ಸೀನ ಚಿತ್ರಕ್ಕಾಗಿ ರು.4 ಲಕ್ಷದ ದಾಖಲೆ ಭಿತ್ತಿಪತ್ರ

Posted By:
Subscribe to Filmibeat Kannada
Mega vinyl poster for Seena
ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಎತ್ತರದ ವಿನೈಲ್ ಭಿತ್ತಿಪತ್ರವೊಂದು ಬೆಂಗಳೂರಿನ ಸುಜಾತ ಚಿತ್ರಮಂದಿರದ ಸಿಗ್ನಲ್ ಬಳಿ ತಲೆ ಎತ್ತಲಿದೆ. 'ಸೀನ' ಚಿತ್ರಕ್ಕಾಗಿ 110x60 ಅಡಿ ಎತ್ತರದ ವಿನೈಲ್ ಭಿತ್ತಿಪತ್ರವನ್ನು ತಯಾರಿಸಲಾಗಿದೆ. ಬೆಂಗಳೂರಿನ ಅತ್ಯಂತ ಜನದಟ್ಟಣೆಯ ಸುಜಾತ ಚಿತ್ರಮಂದಿರದ ಸಿಗ್ನಲ್ ಬಳಿ 'ಸೀನ' ಭಿತ್ತಿಪತ್ರ ನೋಡುಗರನ್ನು ಕ್ಯಾ ಸೀನ್ ಹೈ ಎಂದು ಹುಬ್ಬೇರಿಸಲಿದೆ.

ಚಿತ್ರದ ನಿರ್ದೇಶಕ ಬಸವರಾಜು ಬಳ್ಳಾರಿ ಪ್ರಕಾರ, ಇಷ್ಟೊಂದು ದೊಡ್ಡ ಭಿತ್ತಿಪತ್ರವನ್ನು ಕನ್ನಡ ಚಿತ್ರಗಳಲ್ಲಿ ಇದುವರೆಗೂ ಬಳಸಿಲ್ಲವಂತೆ. ಈ ಬೃಹತ್ ಭಿತ್ತಿಪತ್ರಕ್ಕಾಗಿ ರು.4 ಲಕ್ಷ ಖರ್ಚು ಮಾಡಲಾಗಿದ್ದು, ಇದರ ಹಿಂದೆ 20 ಜನರ ದುಡಿಮೆ ಇದೆಯಂತೆ. ಇದರ ಜೊತೆಗೆ ಬೆಂಗಳೂರಿನ ಇತರೆಡೆಗಳಲ್ಲಿ ಸೀನಾ ಚಿತ್ರದ 60x40 ಗಾತ್ರದ ಭಿತ್ತಿಚಿತ್ರಗಳು, ಜಿಲ್ಲಾ ಕೇಂದ್ರಗಳಲ್ಲಿ 20x10 ಭಿತ್ತಿಪತ್ರಗಳ ಮೂಲಕ ಪ್ರಚಾರ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೀನ ಚಿತ್ರವನ್ನು ಎಸ್ ಮುರಳಿ ಮತ್ತು ಡಿ ಕುಪ್ಪುರಾಜು ನಿರ್ಮಿಸುತ್ತಿದ್ದಾರೆ. ಚಿತ್ರದಿಂದ ಬಂದ ಸ್ವಲ್ಪ ಲಾಭವನ್ನು ಅನಾಥ ಮಕ್ಕಳ ಸಹಾಯಕ್ಕೆ ಬಳಸುವ ಯೋಚನೆಯೂ ನಿರ್ಮಾಪಕರಿಗಿದೆ. ತರುಣ್ ಮತ್ತು ಪ್ರಿಯಾಂಕ ಚಂದ್ರ ಚಿತ್ರದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ರಚನಾ ಮೌರ್ಯ ಎಂಬ ಸೌಂದರ್ಯದ ಸರಕು!
ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada