»   » ಸೆಕ್ಸಿ ಪಾತ್ರಗಳಿಗೆ ಗುಡ್ ಬೈ ಹೇಳಿದ ನಟಿ ನಮಿತಾ

ಸೆಕ್ಸಿ ಪಾತ್ರಗಳಿಗೆ ಗುಡ್ ಬೈ ಹೇಳಿದ ನಟಿ ನಮಿತಾ

Posted By:
Subscribe to Filmibeat Kannada

ಅಯ್ಯೋ ನಾನು ಇನ್ನೂ ಎಷ್ಟು ದಿನ ಸೆಕ್ಸಿ ಪಾತ್ರಗಳಲ್ಲಿ ನಟಿಸುವುದು, ಸಾಕಾಗಿ ಹೋಗಿದೆಯಪ್ಪಾ ಎಂದು ಚಿತ್ರನಟಿ ನಮಿತಾ ಹೇಳಿದ್ದಾರೆ. ಅವರು ಇನ್ನು ಮುಂದೆ ವಿಭಿನ್ನ ಪಾತ್ರಗಳಲ್ಲಿ ನಟಿಸುವುದಾಗಿ ತಿಳಿಸಿದ್ದು ಬಿಕಿನಿ ಮತ್ತು ತುಂಡುಡುಗೆಯನ್ನು ತೊಡುವುದಿಲ್ಲ ಎಂದು ಭೀಷ್ಮ ಶಪಥ ಮಾಡಿದ್ದಾರೆ.

ನಮಿತಾ ಅವರ ಈ ದೃಢ ನಿರ್ಧಾರದಿಂದ ಅವರ ಅಪಾರ ಅಭಿಮಾನಿ ಬಳಗ ನಿರಾಸೆಗೆ ಒಳಗಾಗಿದೆ. "ಇನ್ನು ಎಷ್ಟು ದಿನ ಅಂತ ದೇಹ ಪ್ರದರ್ಶಿಸುವುದು. ಇನ್ನು ಮುಂದಾದರು ಪ್ರತಿಭೆ ಸವಾಲೊಡ್ಡುವ ಪಾತ್ರಗಳಲ್ಲಿ ಅಭಿನಯಿಸುತ್ತೇನೆ. ಈ ಹಿಂದೆ ತಾವು ಅಭಿನಯಿಸಿದ್ದ ಅಂತಹ ಪಾತ್ರಗಳನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ದರು" ಎಂದಿದ್ದಾರೆ.

ವಿಷಯ ಹೀಗಿದ್ದರೂ ನಿರ್ಮಾಪಕರು ಮತ್ತು ನಿರ್ದೇಶಕರು ಮಾತ್ರ ತಮ್ಮನ್ನು ಬಿಕಿನಿ, ತುಂಡುಡುಗೆಯಲ್ಲೇ ತೋರಿಸಲು ಇಷ್ಟಪಡುತ್ತಿದ್ದಾರೆ. ಇನ್ನು ಮುಂದೆ ಕುರ್ತಾ ಮತ್ತು ಸಲ್ವಾರ್ ಕಮೀಜ್ ತೊಟ್ಟು ನಟಿಸಲಿದ್ದೇನೆ. ಬಾಲಿವುಡ್ ತಾರೆ ಶ್ರೀದೇವಿ ಅವರ ಸದ್ಮ ಚಿತ್ರದಂತೆ ಗಂಭೀರ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿ ನಮಿತಾ ಧೈರ್ಯವಾಗಿ ಹೇಳಿದ್ದಾರೆ.

ಆದರೆ 'ಹೂ' ಚಿತ್ರದಲ್ಲಿ ತಮ್ಮ ವೈಯ್ಯಾರ ಬೇಡ ಬೇಡ ಎಂದರೂ ಇಣುಕಿದೆಯಲ್ಲಾ? ಎಂದರೆ ರವಿಚಂದ್ರನ್ ಮೇಲಿನ ಅಭಿಮಾನದಿಂದ ಆ ಚಿತ್ರವನ್ನು ಒಪ್ಪಿಕೊಂಡೆ. ನಾಯಕಿಯರನ್ನು ಹೇಗೆ ತೋರಿಸಬೇಕು ಎಂದ ಅರಿತ ಕಲಾವಿದ ರವಿ ಸರ್. ಎಲ್ಲಿ ಬೆಳಕಿರಬೇಕು ಎಲ್ಲಿ ಕತ್ತಲಿರಬೇಕು ಎಂಬುದು ರವಿ ಕಣ್ಣಿಗೆ ಚೆನ್ನಾಗಿ ಗೊತ್ತ್ತಾಗುತ್ತದೆ ಎಂದಿದ್ದಾರೆ ನಮಿತಾ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada