For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಅಣ್ಣಾ ಬಾಂಡ್' ಕ್ಲೈಮ್ಯಾಕ್ಸ್‌ಗೆ ಭರ್ಜರಿ ಫೈಟ್ಸ್

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ದುನಿಯಾ ಸೂರಿ ನಿರ್ದೇಶಿಸುತ್ತಿರುವ 'ಅಣ್ಣಾ ಬಾಂಡ್' ಚಿತ್ರದ ಕ್ಲೈಮ್ಯಾಕ್ಸ್‌ಗೆ ಭರ್ಜರಿ ಫೈಟ್ಸ್ ಚಿತ್ರೀಕರಿಸಿಕೊಳ್ಳಲಾಗಿದೆ. ದುಬಾರೆ ಹಾಗೂ ಮುತ್ತತ್ತಿಯ ಅಭಯಾರಣ್ಯದಲ್ಲಿ ಈ ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ.

  ಇದಕ್ಕಾಗಿ ವಿಶೇಷ ಬೈಕನ್ನೂ ಬಳಸಿಕೊಳ್ಳಲಾಗಿದೆ. ಅಸ್ಥಿಪಂಚರದ ಮಾದರಿಯಲ್ಲಿರುವ ಬೈಕ್ ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ ಎನ್ನುತ್ತದೆ ಚಿತ್ರತಂಡ. 'ಜಾಕಿ' ಚಿತ್ರದಲ್ಲಿ ಸೂರಿ ಪುಟಾಣಿ ಬೈಕನ್ನು ಹಾಡಿನ ಸನ್ನಿವೇಶಕ್ಕೆ ಬಳಸಿಕೊಂಡಿದ್ದರು. ಈ ಬಾರಿ 'ಅಣ್ಣಾ ಬಾಂಡ್' ಚಿತ್ರದಲ್ಲಿ ಫೈಟ್ಸ್‌ಗೆ ವಿಚಿತ್ರ ಬೈಕನ್ನು ಬಳಸಿಕೊಂಡಿದ್ದಾರೆ.

  ಕ್ಲೈಮ್ಯಾಕ್ಸ್ ಸನ್ನಿವೇಶದ ಫೈಟ್ಸ್‌ಗೆ ವಿದೇಶಿ ಸಾಹಸ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣವೂ ಮುಗಿದಿದೆ ಎಂದು ಚಿತ್ರತಂಡ ಹೇಳಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಪ್ರಿಯಾಮಣಿ, ನಿಧಿ ಸುಬ್ಬಯ್ಯ ಚಿತ್ರದ ನಾಯಕಿಯರು. (ಒನ್‌ಇಂಡಿಯಾ ಕನ್ನಡ)

  English summary
  Power star Puneet Rajkumar finished the climax fight shoot of Anna Bond. A ghost faced motor cycle is used for this sequence. The climax sequences are picturised in Dubare and Muththeththi forest areas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X