»   » ವಿಜಿಯ ರಾಧೆಯಾಗಿ ತೆಲುಗಿನ ಮಧುವಿಕಾ

ವಿಜಿಯ ರಾಧೆಯಾಗಿ ತೆಲುಗಿನ ಮಧುವಿಕಾ

Subscribe to Filmibeat Kannada

ಜಿ.ಎಲ್.ಕೆ ಫಿಲಂಸ್ ಲಾಂಛನದಲ್ಲಿ ಜಿ.ರವಿಕಮಲ್ ಮತ್ತು ಜಿ.ಶ್ರೀಧರ್ ನಿರ್ಮಿಸುತ್ತಿರುವ ಚಿತ್ರ 'ರಾಧ' ಚಿತ್ರದ ನಾಯಕಿಯಾಗಿ ಮಧುವಿಕಾ ಆಯ್ಕೆಯಾಗಿದ್ದಾರೆ. ನೆರೆಯ ಆಂಧ್ರದವರಾದ ಇವರು ತೆಲುಗಿನ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ರಾಯಲ್‌ಸೀಮಾ ಪ್ರಾಂತ್ಯದ ಕಡಪದ ಬಳಿಯ ಗುರುಕುಂಡದಲ್ಲಿ ಈಗ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ನಾಯಕಿಯನ್ನು ಹುಡುಕಿಕೊಂಡು ಡಾಬಾದ ಬಳಿ ಬಂದ ನಾಯಕನಿಗೆ ಖಳನಟರು ಎದುರಾಗುತ್ತಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆಯುತ್ತದೆ. ಈ ಮೇಲಿನ ಸನ್ನಿವೇಶವನ್ನು ನಿರ್ದೇಶಕ ಹರಿಕಿರಣ್ ಕಡಪದ ಬಳಿಯ ಖಾಸಗಿ ಡಾಬಾದಲ್ಲಿ ಚಿತ್ರೀಕರಿಸಿಕೊಂಡರು. ಈ ಸನ್ನಿವೇಶದಲ್ಲಿ ನಾಯಕ ವಿಜಯರಾಘವೇಂದ್ರ, ಖಳನಟರಾಗಿ ಅಭಿನಯಿಸುತ್ತಿರುವ ನಕುಲ್‌ಬಾಲಚಂದರ್ ಹಾಗೂ ಸುನೀಲ್ ಬೀರೂರು ಪಾಲ್ಗೊಂಡಿದ್ದರು.

ಎನ್.ವಿ.ಸುರೇಂದ್ರರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಮುರಳಿ ಬೋಡಾಪತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸತೀಶ್‌ಬಾಬು ಛಾಯಾಗ್ರಹಣ, ರವಿಅಲಾ ಸಂಗೀತ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಮಧುವಿಕಾ, ಜಯಪ್ರಕಾಶ್ ರೆಡ್ಡಿ, ಅಭಿನಯ ಶ್ರೀ, ನಟರಾಜ್, ನಕುಲ್, ಶಲೇತ್, ವಿಶ್ವನಾಥ್ ಲಂಕಾ, ಪ್ರಕೃತಿ ಗೌಡ ಮುಂತಾದವರಿದ್ದಾರೆ. ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ವಿಜಯರಂಗರಾಜು ಅವರು ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada