ರಮ್ಯಾ ಅಭಿಮಾನಿಗಳಿಂದ ಫಿಲಂ ಚೇಂಬರ್ ಬಳಿ ಪ್ರತಿಭಟನೆ
ಕನ್ನಡ ಚಿತ್ರರಂಗದಿಂದ ಗೋಲ್ಡನ್ ಗರ್ಲ್ ರಮ್ಯಾ ಅವರಿಗೆ ಒಂದು ವರ್ಷ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ ಆಕೆಯ ಅಭಿಮಾನಿಗಳು ಬುಧವಾರ (ಮಾ.23) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದರು. ಫಿಲಂ ಚೇಂಬರ್ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ರಮ್ಯಾ ವಿರುದ್ಧದ ಬಹಿಷ್ಕಾರ ಕ್ರಮವನ್ನು ಕೂಡಲೆ ವಾಪಸ್ ಪಡೆಯಬೇಕು ಎಂದು ಅವರು ಫಿಲಂ ಚೇಂಬರನ್ನು ಒತ್ತಾಯಿಸಿದರು. ಆದರೆ ಫಿಲಂ ಚೇಂಬರ್ ಪದಾಧಿಕಾರಿಗಳು ಇಂದು ತುರ್ತು ಸಭೆ ಸೇರಿ ಮತ್ತೊಮ್ಮೆ ಚರ್ಚೆಯಲ್ಲಿ ತೊಡಗಿದ್ದಾರೆ. ರಮ್ಯಾ ವಿರುದ್ಧದ ಬಹಿಷ್ಕಾರ ವಾಪಸ್ ಪಡೆಯುತ್ತಾರೋ ಇಲ್ಲವೋ ಎಂಬ ಕುತೂಹಲ ಮೂಡಿದೆ.
ಇತಿಹಾಸದಲ್ಲಿ ಯಾವತ್ತೂ ಬೀದಿಗಿಳಿದು ಪ್ರತಿಭಟಿಸಿದ ದಾಖಲೆಗಳಿಲ್ಲದ ರಮ್ಯಾ ಅಭಿಮಾನಿಗಳ ಸಂಘ ಇಂದು ಕಾಣಿಸಿಕೊಂಡಿದ್ದು ವಿಶೇಷ. ಬಹಿಷ್ಕಾರಕ್ಕೆ ಐ ಡೋಂಟ್ ಕೇರ್ ಎಂದಿರುವ ರಮ್ಯಾ ಮಾತ್ರ ಇಂದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಹುಶಃ ಮಾಧ್ಯಮಗಳೊಂದಿಗೆ ಅವರೂ ಮಾತಾಡಿ ಮಾತಾಡಿ ಸುಸ್ತಾಗಿರಬೇಕು.
More from Filmibeat
English summary
Actress Ramya fans protest against in front of the Karnataka films chamber of commerce (KFCC)office on 23rd March. Protesters demands that KFCC to be withdraw ban on Ramya. What is the use of this ban when I had already announced my decision to quit? she reacted earlier.
ರಮ್ಯಾ ಅಂಬರೀಷ್ ಬಸಂತಕುಮಾರ್ ಪಾಟೀಲ್ ವಿವಾದ ಕೆಎಫ್ಸಿಸಿ ಚಿರಂಜೀವಿ ಸರ್ಜಾ ramya ambarish basant kumar patil controversy kfcc chiranjeevi sarja


Click it and Unblock the Notifications











