»   » ಹಿನ್ನೆಲೆ ಸಂಗೀತದಲ್ಲಿ ಘಂ ಎಂದ 'ಹೂ'

ಹಿನ್ನೆಲೆ ಸಂಗೀತದಲ್ಲಿ ಘಂ ಎಂದ 'ಹೂ'

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಹೂ' ಚಿತ್ರಕ್ಕೆ ಅವರದೇ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಆಳವಡಿಸಲಾಗುತ್ತಿದೆ. ನಾಯಕನಾಗಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟ ರವಿಚಂದ್ರನ್ ನಂತರದ ದಿನಗಳಲ್ಲಿ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಈಗ ಅವರು ನಟನೆಯೊಂದಿಗೆ ನಿರ್ದೇಶನವನ್ನೂ ಮಾಡುತ್ತಿರುವ ಚಿತ್ರ 'ಹೂ. ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ರವಿಚಂದ್ರನ್ ಅವರದೆ. ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್ ಗಾಂಧಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರೀತಿ-ಪ್ರೇಮ ಕುರಿತು ರವಿಚಂದ್ರನ್ ಅವರದು ವಿಶಿಷ್ಟ ವ್ಯಾಖ್ಯಾನ. ಇವರ ನಟನೆ ಪ್ರೇಮ ಪ್ರಧಾನ ಚಿತ್ರಗಳಲ್ಲೇ ಹೆಚ್ಚು. ಪ್ರೀತಿಯ ಬಗ್ಗೆ ಹೆಚ್ಚಿನ ಒಲವಿರುವ ಇವರು ಪ್ರೇಮಿಗಳ ದಿನಾಚರಣೆಯಂದು ಜನಪ್ರಿಯ ವಾಹಿನಿಯೊಂದರಲ್ಲಿ 'ಹೂ'ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು.

ಜಿ.ಎಸ್.ವಿ.ಸೀತಾರಾಂ ಅವರ ಛಾಯಾಗ್ರಹಣವಿರುವ 'ಹೂಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ರವಿಚಂದ್ರನ್ ಅವರಿಗೆ ಮೀರಾಜಾಸ್ಮಿನ್ ಹಾಗೂ ನಮಿತಾ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್ ಹಾಗೂ ಶರಣ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada