»   » ರಿಲಯನ್ಸ್ ಪಿಕ್ಚರ್ಸ್ ನಿಂದ ಇನ್ನಷ್ಟು ಕನ್ನಡ ಚಿತ್ರಗಳು

ರಿಲಯನ್ಸ್ ಪಿಕ್ಚರ್ಸ್ ನಿಂದ ಇನ್ನಷ್ಟು ಕನ್ನಡ ಚಿತ್ರಗಳು

Posted By:
Subscribe to Filmibeat Kannada

ರಿಲಯನ್ಸ್ ಬಿಗ್ ಪಿಕ್ಚರ್ಸ್ ಕನ್ನಡದಲ್ಲಿ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲು ಮುಂದಾಗಿದೆ. ಒಂಭತ್ತು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಲು ರಿಲಯನ್ಸ್ ಬಿಗ್ ಫಿಕ್ಚರ್ಸ್ ಸಿದ್ಧತೆ ನಡೆದಿದೆ. ಕಮರ್ಷಿಯಲ್ ಚಿತ್ರಗಳಷ್ಟೆ ಅಲ್ಲದೆ ಕಲಾತ್ಮಕ ಚಿತ್ರಗಳನ್ನು ರಿಲಯನ್ಸ್ ಸಂಸ್ಥೆ ನಿರ್ಮಿಸಲಿದೆ.

ಏತನ್ಮಧ್ಯೆ ರಿಲಯನ್ಸ್ ನಿರ್ಮಾಣದ ಕನ್ನಡದ ಚೊಚ್ಚಲ ಚಿತ್ರ 'ಇಜ್ಜೋಡು' ಬಿಡುಗಡೆಗೆ ಸಜ್ಜಾಗಿದೆ. ಎಂ ಎಸ್ ಸತ್ಯು ನಿರ್ದೇಶನದ 'ಇಜ್ಜೋಡು' ಮುಖ್ಯಪಾತ್ರದಲ್ಲಿ ಅನಿರುದ್ಧ ಹಾಗೂ ಮೀರಾ ಜಾಸ್ಮಿನ್ ನಟಿಸಿದ್ದಾರೆ. ಕರ್ನಾಟಕದಲ್ಲಿ ಆಚರಣೆಯಲ್ಲಿರುವ 'ಬಸವಿ'(ದೇವದಾಸಿ) ಪದ್ದ್ಧತಿಯಲ್ಲಿ ಬಸವಿಯರು ಅಪಮೌಲ್ಯಕ್ಕೊಳಗಾಗಿ ವೇಶ್ಯೆಯರಾಗಿ ಬದಲಾಗುತ್ತಿರುವ ಕಥಾಹಂದರವನ್ನು 'ಇಜ್ಜೋಡು' ಚಿತ್ರ ಹೊಂದಿದೆ.

ಏಪ್ರಿಲ್ 30ರಂದು ಇಜ್ಜೋಡು ಚಿತ್ರವನ್ನು ತೆರೆಗೆ ತರುತ್ತಿದೆ ರಿಲಯನ್ಸ್ ಬಿಗ್ ಪಿಕ್ಚರ್ಸ್. ಈ ಬಗ್ಗೆ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ರಾಮನಾಥನ್, ಮುಂಬರುವ ದಿನಗಳಲ್ಲಿ ಕಂಪನಿಯು ಮತ್ತಷ್ಟು ಕನ್ನಡ ಚಿತ್ರಗಳನ್ನು ನಿರ್ಮಿಸಲಿದೆ. ಗಿರೀಶ್ ಕಾಸರವಳ್ಳಿ ಅವರಂತಹ ಪ್ರತಿಭಾವಂತ ನಿರ್ದೇಶಕರ ಜೊತೆ ಚಿತ್ರ ತೆಗೆಯುವುದಾಗಿ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada