For Quick Alerts
  ALLOW NOTIFICATIONS  
  For Daily Alerts

  ಸೂರಪ್ಪ ಬಾಬು ರಾಜೀನಾಮೆಗೆ ಕಾರಣ ನಾನಲ್ಲ; ಮಂಜು

  |

  ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಚಿತ್ರನಿರ್ಮಾಪಕ ಸೂರಪ್ಪ ಬಾಬು ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ನಿರ್ಧಾರಕ್ಕೆ ಟಿವಿ ಸಂದರ್ಶನವೊಂದರಲ್ಲಿ ಕೆ ಮಂಜು ತಮ್ಮನ್ನು ಕುರಿತು 'ಚೇಲಾ' ಅಂದಿದ್ದು ಕಾರಣ ಅಂದಿದ್ದಾರೆ. ಆದರೆ ಸೂರಪ್ಪ ಬಾಬು ಅವರ ಈ ಆರೋಪವನ್ನು ನಿರಾಕರಿಸಿರುವ ಕೆ ಮಂಜು, ಅವರ ರಾಜೀನಾಮೆಗೆ ತಾವು ಕಾರಣರಲ್ಲ, ತಮಗೂ ಅದಕ್ಕೂ ಸಂಬಂಧವಿಲ್ಲ" ಎಂದಿದ್ದಾರೆ.

  ವಿಷಯವನ್ನು ಮಾಧ್ಯಮಗಳಿಗೆ ಸ್ಪಷ್ಟಪಡಿಸಿರುವ ಕೆ ಮಂಜು, ಯಾವುದೇ ಸಂದರ್ಶನದಲ್ಲಿ ನಾನು ಸೂರಪ್ಪ ಬಾಬುರನ್ನು ನೇರವಾಗಿ ಚೇಲಾ ಅಂದಿಲ್ಲ; ಕುಂಬಳಕಾಯಿ ಕಳ್ಳ ಅಂದರೆ ತಮ್ಮ ಹೆಗಲ ಮುಟ್ಟಿ ನೋಡಿಕೊಳ್ಳುವುದೇಕೆ" ಎಂದಿದ್ದಾರೆ. ಮುನಿರತ್ನ ಒಳ್ಲೆಯ ವ್ಯಕ್ತಿ, ಅವರು ಯಾರಿಗೂ ತೊಂದರೆ ಕೊಡುವ ವ್ಯಕ್ತಿ ಅಲ್ಲ. ಅವರ ಹಿಂದಿರುವ ಕೆಲವು ಶಕ್ತಿಗಳು ಅವರ ದಾರಿಯನ್ನು ತಪ್ಪಿಸುತ್ತಿದ್ದಾರೆ ಎಂಬುದಷ್ಟೇ ತಮ್ಮ ಹೇಳಿಕೆ" ಎಂದಿದ್ದಾರೆ ಮಂಜು.

  ಒಟ್ಟಿನಲ್ಲಿ ಕಠಾರಿವೀರ ಸುರಸುಂದರಾಂಗಿ ಹಾಗೂ ಗಾಡ್ ಫಾದರ್ ಚಿತ್ರಗಳ ಬಿಡುಗಡೆ ವಿಷಯದಲ್ಲಿ ಮುನಿರತ್ನ ಹಾಗೂ ಮಂಜು ಮಧ್ಯೆ ನಡೆಯುತ್ತಿರುವ ಜಟಾಪಟಿ ಈಗ ತಾರಕ್ಕೇರಿದೆ. ನಾಳೆ 4 ಗಂಟೆಗೆ ಅಂಬರೀಷ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದ್ದು ನಂತರ ಆಶಾದಾಯಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Producers Association Secretary, Producer Surappa Babu Resigned for the post of Producers Association Secretary. He Clarified that he resigned because of 'Chela' word told bu producer K Manju. But K Manju Denies it. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X