»   » ಮಂಜು 'ಚೇಲಾ' ಮಾತು; ಸೂರಪ್ಪ ಬಾಬು ರಾಜೀನಾಮೆ

ಮಂಜು 'ಚೇಲಾ' ಮಾತು; ಸೂರಪ್ಪ ಬಾಬು ರಾಜೀನಾಮೆ

Posted By:
Subscribe to Filmibeat Kannada
Surappa Babu K Manju
ನಿರ್ಮಾಪಕರ ಸಂಘದ ಕಾರ್ಯದರ್ಶಿ ಕನ್ನಡದ ಚಿತ್ರನಿರ್ಮಾಪಕ ಸೂರಪ್ಪ ಬಾಬು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವಿಷಯವನ್ನು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಗಣೇಶ್. ನಂತರ ಮಾತನಾಡಿರುವ ಸೂರಪ್ಪ ಬಾಬು, "ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ವಾಪಸ್ ಪಡೆಯುವುದಿಲ್ಲ. ಇಷ್ಟು ದಿನ ತಮಗೆ ಸಹಕಾರ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ" ಎಂದಿದ್ದಾರೆ.

ಕಠಾರಿವೀರ ಸುರಸುಂದರಾಂಗಿ ಹಾಗೂ ಗಾಡ್ ಫಾದರ್ ಚಿತ್ರಗಳ ಬಿಡುಗಡೆ ವಿಷಯದಲ್ಲಿ ಕ್ರಮವಾಗಿ ನಿರ್ಮಾಪಕರಾಗಿರುವ ಮುನಿರತ್ನ ಹಾಗೂ ಕೆ ಮಂಜು ಮಧ್ಯೆ ನಡೆಯುತ್ತಿರುವ ಜಟಾಪಟಿ ಈಗ ತಾರಕ್ಕೇರಿದೆ. ಫಿಲಂ ಚೇಂಬರ್ ನಲ್ಲಿ ತಮ್ಮ ಪರವಾಗಿ ತೀರ್ಪು ಬರದಿದ್ದರೆ ತಾವು ಫಿಲಂ ಚೇಂಬರ್ ಮುಂದೆ ಧರಣಿ ಕೂರುವುದಾಗಿ ನಿರ್ಮಾಪಕ ಕೆ. ಮಂಜು ಗುಡುಗಿದ್ದಾರೆ.

ಈ ಮಧ್ಯೆ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಮಂಜು ತಮ್ಮನ್ನು 'ಚೇಲಾ' ಎಂದಿದ್ದಾರೆಂದೂ, ಅದರಿಂದ ನೊಂದಿರುವ ತಾವು ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿಯೂ ಸೂರಪ್ಪ ಬಾಬು ಘೋಷಿಸಿದ್ದಾರೆ. "ನಾನು ಯಾರ ಚೇಲಾ ಅಲ್ಲ, ಯಾರದೇ ಮಾತು ಕೇಳಿ ಕುಣಿಯುವ ಜರೂರತ್ತು ನನಗಿಲ್ಲ. ಮಂಜು ಹೇಳಿಕೆಯಿಂದ ನನಗೆ ತುಂಬಾ ಬೇಸರವಾಗಿದೆ" ಎಂದಿದ್ದಾರೆ ಸೂರಪ್ಪ ಬಾಬು. (ಒನ್ ಇಂಡಿಯಾ ಕನ್ನಡ)

English summary
Producers Association Secretary, Producer Surappa Babu Resigned for the post of Producers Association Secretary. He Clarified that he resigned because of 'Chela' word told bu producer K Manju. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada