ಉಪೇಂದ್ರ ನಿರ್ದೇಶನದ ಶಿವಣ್ಣ ಚಿತ್ರಕ್ಕೆ ಕ್ಷಣಗಣನೆ

ಇದೀಗ 'ಶ್ರೀಮುತ್ತು' ಎಂಬ ಸ್ವಂತ ಬ್ಯಾನರ್ ಪ್ರಾರಂಭಿಸಿರುವ ಶಿವಣ್ಣ, ಮೊದಲ ನಿರ್ಮಾಣವನ್ನು ತಮ್ಮ ನಟನೆ ಹಾಗೂ ಉಪ್ಪಿ ನಿರ್ದೇಶನದ ಚಿತ್ರದ ಮೂಲಕ ಮಾಡಲು ಹೊರಟಿದ್ದಾರೆ. ಸದ್ಯಕ್ಕೆ ಈ ಇಬ್ಬರ ಕೈಯಲ್ಲೂ ಸಾಕಷ್ಟು ಚಿತ್ರಗಳಿರುವುದರಿಂದ ಸ್ವಲ್ಪ ತಡವಾಗಬಹುದು. ಆದರೆ ಇನ್ನೊಂದು ತಿಂಗಳಲ್ಲಿ ಪ್ರಾರಂಭವಂತೂ ಗ್ಯಾರಂಟಿ ಎಂಬುದು ಸುದ್ದಿಮೂಲಗಳಿಂದ ಖಚಿತವಾಗಿದೆ.
ಉಪೇಂದ್ರ ಶಿವಣ್ಣನಿಗೆ ರೆಡಿ ಮಾಡಿರುವ ಕಥೆ ತೀರಾ ವಿಭಿನ್ನವಾಗಿದೆಯಂತೆ. ಶಿವಣ್ಣ ಖುಷಿಯಿಂದ ಒಪ್ಪಿಕೊಂಡಾಗಿದೆ. ಕೇವಲ ಮುಹೂರ್ತವೊಂದೇ ಬಾಕಿ. ಮುಂದಿನ ವರ್ಷದ ಪ್ರಾರಂಭದಲ್ಲೇ ಸೆಟ್ಟೇರಲಿದೆ ಚಿತ್ರ. ಶಿವಣ್ಣ-ಉಪೇಂದ್ರ ಸಂಗಮದ ಚಿತ್ರದ ಸುದ್ದಿ ಕೇಳಿ ಪ್ರೇಕ್ಷಕರು ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಕನ್ನಡಕ್ಕೆ ಓಂ ನಂತಹ ಮತ್ತೊಂದು ಯಶಸ್ವೀ ಚಿತ್ರ ಬರಲಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Hat Trick Hero Shivarajkumar soon to start his own production house named as Sri Muthu. He has eager to produce his first movie in the direction of Upendra.


Click it and Unblock the Notifications











