»   » ಮುಂಗಾರು ಮಳೆ-3 ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಮುಂಗಾರು ಮಳೆ-3 ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

Subscribe to Filmibeat Kannada
Mungaru Male song - 3
ಮುಂಗಾರು ಮಳೆ ಬಂದಾಗ ಏನೇನು ಆಗುತ್ತದೆ ಅನ್ನುವುದು ಸಾಲುಸಾಲಿನಲ್ಲಿಯೂ ಗೋಚರ. ಈ ಹಾಡು ಓದಿ ಮುಗಿಸಿದ ನಂತರ ಮಳೆಯಲ್ಲಿ ನೆನೆದಂತೆ ಅನುಭವ... ಇನ್ನು ಚಿತ್ರದಲ್ಲಿ ಈ ಹಾಡು ನೋಡುವುದು ಇನ್ನೊಂದು ಅನುಭವ!

ಗಾಯಕ : ಸೋನು ನಿಗಮ್‌
ಸಾಹಿತ್ಯ : ಯೋಗರಾಜ್‌ ಭಟ್‌

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯಾಡೆಯುವುದೋ, ತಿಳಿಯದಾಗಿದೆ

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬಾ, ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ, ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋ
ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು, ಏನೋ ಮೋಡಿಯೋ

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ, ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿಂದ, ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ, ಯಾರು ಬರೆದರೋ
ಯಾವ ಪ್ರೀತಿ ಹೂವು, ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ, ಯಾರು ಬಲ್ಲರೋ

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಒಲವ ಚಂದಮಾಮ, ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ, ಹೃದಯ ಹೊರಟಿದೇ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ, ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ, ಕಳೆದು ಹೊಗೋ ಸುಖವಾ ಇಂದು
ಧನ್ಯನಾದೆ ಪಡೆದುಕೊಂಡು, ಹೊಸ ಜನ್ಮವೋ

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ನಿಮ್ಮ ಗಮನಕ್ಕೆ : ಪಿವಿಆರ್‌ ಸಿನೆಮಾ ಥಿಯೇಟರ್‌ 080-41100787, 22067882

ಮುಂಗಾರು ಮಳೆ ರಿಮೇಕ್ ಹಾಡು ಲೋಕಾರ್ಪಣೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada