»   » ‘ಜೂಲಿ’ ಸಿನಿಮಾದಲ್ಲಿ ವಲ್ಗರ್‌ ಆಗಿ ನಟಿಸಿಲ್ಲ -ರಮ್ಯ

‘ಜೂಲಿ’ ಸಿನಿಮಾದಲ್ಲಿ ವಲ್ಗರ್‌ ಆಗಿ ನಟಿಸಿಲ್ಲ -ರಮ್ಯ

Posted By: Staff
Subscribe to Filmibeat Kannada

'ನನಗೆ ವಲ್ಗರ್‌ ಆಗಿ ಮಾಡೋದಕ್ಕೆ ಇಷ್ಟವಿಲ್ಲ . ಜೂಲಿ ಚಿತ್ರದಲ್ಲಿ ದೀನು ಮೋರ್ಯ ಜತೆ ಸಹಜವಾಗಿ ಅಭಿನಯಿಸಿದ್ದೇನೆ. ಅದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ. ಚಿತ್ರದಲ್ಲಿರುವ ಎರಡು ರೋಮ್ಯಾಂಟಿಕ್‌ ಹಾಡುಗಳಲ್ಲಿ ಅತಿ ಕಾಳಜಿಯಿಂದ ನಟಿಸಿದ್ದೇನೆ. ಮೊಣಕಾಲಿನ ವರೆಗೆ ಸ್ಕರ್ಟ್‌ ಧರಿಸಿದ್ದೇನೆ. ನಿಮಗೆ ಏನಾದರೂ ಅಶ್ಲೀಲತೆ ಕಂಡಿದ್ದರೆ, ಅದು ನಿಮ್ಮ ಸಮಸ್ಯೆ, ನನ್ನದಲ್ಲ...".

-ಹೀಗೆ ತಮ್ಮ ಸಮರ್ಥನೆಯನ್ನು ರಮ್ಯ, ಸುದ್ದಿಗಾರರ ಮುಂದಿಟ್ಟರು.

ಜೂಲಿ ಬಗ್ಗೆ ಮಾತನಾಡಿದ ಅವರು, 'ಪ್ರತಿ ಹೆಣ್ಣಿನಲ್ಲೂ ತಾಯ್ತನದ ತುಡಿತ ಇರುತ್ತದೆ. ಗರ್ಭಪಾತದ ವಿರುದ್ಧ ಚಿತ್ರದಲ್ಲಿ ಸಂದೇಶವಿದೆ. ಮಗುವನ್ನು ನೋಡಿಕೊಳ್ಳಲಾಗದವರು, ಅದನ್ನು ಮಾಡಬಾರದು" ಎಂಬ ಸತ್ಯವನ್ನು ಹೇಳಿದರು.

ದತ್ತ, ತನನಂ ತನನಂ , ಜೊತೆಜೊತೆಯಲಿ ಚಿತ್ರಗಳಲ್ಲಿ ಅವರು ಸದ್ಯಕ್ಕೆ ಬ್ಯೂಸಿ. ವಿಂಬಲ್ಡನ್‌ ನೋಡಲು ಜುಲೈನಲ್ಲಿ ಲಂಡನ್‌ಗೆ ತೆರಳುತ್ತಿರುವ ರಮ್ಯ, ಆಗಸ್ಟ್‌ನಲ್ಲಿ ಅಮೆರಿಕಕ್ಕೆ ತೆರಳುತ್ತಾರಂತೆ. ತಮ್ಮ ಐದು ವರ್ಷಗಳ ಆದ್ಯತೆಗಳನ್ನು ಪಟ್ಟಿಮಾಡಿಟ್ಟಿರುವ ರಮ್ಯ, ಈ ಪಟ್ಟಿಯಲ್ಲಿ ಮದುವೆ ವಿಚಾರವನ್ನು ಸೇರಿಸಿಲ್ಲವಂತೆ!

ನಾಗತಿಹಳ್ಳಿ ನಿರ್ದೇಶದಲ್ಲಿಯೇ ತೆಲುಗಿನಲ್ಲಿ 'ಅಮೃತಧಾರೆ" ನಿರ್ಮಾಣವಾಗಲಿದೆ ಎಂಬ ಖುಷಿ ಹಂಚಿಕೊಂಡ ರಮ್ಯ, ಇನ್ನೊಂದು ಖುಷಿ ಮತ್ತು ತಮಾಷೆಯ ವಿಚಾರವನ್ನು ಹೇಳಿದರು.

ನನ್ನ ಜೊತೆ ಸಿನಿಮಾದಲ್ಲಿ ನಟಿಸುವಾಗ ಉಪೇಂದ್ರ, ಸುದೀಪ್‌ ಮತ್ತು ಪುನೀತ್‌ ಹೆಣ್ಣು ಮಕ್ಕಳ ಅಪ್ಪ ಆಗಿದ್ದಾರೆ. ಈ ಸಾಲಿಗೆ 'ತನನಂ ತನನಂ" ಚಿತ್ರದ ನಾಯಕ ಶಾಮ್‌ ಹೊಸ ಸೇರ್ಪಡೆ. ಶಾಮ್‌ ಅವರ ಪತ್ನಿ ಚೆನ್ನೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರಮ್ಯ, ಸೇವಂತಿಯಂತೆ ನಕ್ಕರು.

Read more about: kannada, karnataka, bangalore, ramya
English summary
The pretty actress of Kannada cinema Ramya talking to media persons after the film Julie screening informed that she has not exposed much in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada