»   »  ಪ್ರೀತ್ಸೆ ಪ್ರೀತ್ಸೆ ,ಬಂದೇ ಬರ್ತಾಳೆ ಜುಗಲ್ ಬಂದಿ

ಪ್ರೀತ್ಸೆ ಪ್ರೀತ್ಸೆ ,ಬಂದೇ ಬರ್ತಾಳೆ ಜುಗಲ್ ಬಂದಿ

Posted By:
Subscribe to Filmibeat Kannada

ಇತ್ತೀಚಿಗೆ ರಿಮೇಕ್ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ ಲೂಸ್ ಮಾದ ಅಲಿಯಾಸ್ ಯೋಗೀಶ್ ಅಭಿನಯದ 'ಪ್ರೀತ್ಸೆ ಪ್ರೀತ್ಸೆ ' ಮತ್ತು ಹೊಸ ಪರಿಚಯ ಸೂರ್ಯ ಅಭಿನಯದ 'ಬಂದೇ ಬರ್ತಾಳೆ' ಎರಡು ಚಿತ್ರ ಇದೇ ಶುಕ್ರವಾರ ತೆರಕಾಣಲಿದೆ.

ಅಂಬಾರಿ ಚಿತ್ರದ ಯಶಸ್ಸಿನ ನಂತರ ಯೋಗೀಶ್ ಅಭಿನಯದ ಪ್ರೀತ್ಸೆ ಪ್ರೀತ್ಸೆ ಚಿತ್ರ ಮೋಹನ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಬಿಡುಗಡೆಗೊಳ್ಳಲಿದೆ. ಕೃಷ್ಣಯ್ಯ ಚಿತ್ರದ ನಿರ್ಮಾಪಕರು. ಕಳೆದ ವರ್ಷದ ಮೇಗಾಹಿಟ್ ಚಿತ್ರ 'ಗಜ' ಚಿತ್ರದ ನಿರ್ದೇಶಕ ಮಾದೇಶ್ ಈ ರೊಮ್ಯಾಂಟಿಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಉದಯತಾರ, ಪ್ರಜ್ಞಾ, ಜೈಜಗದೀಶ್, ಸಂಗೀತ, ರಮೇಶ್ ಭಟ್, ಪಿ ಎನ್ ಸತ್ಯ ಮುಖ್ಯ ತಾರಾಗಣದಲ್ಲಿದ್ದಾರೆ. ಅನೂಪ್ ಸೀಳನ್ ಅವರ ಸಂಗೀತ ಮತ್ತು ವೀನಸ್ ಮೂರ್ತಿ ಯವರ ಛಾಯಾಗ್ರಹಣವಿದೆ.

ಹೊಸಬರೇ ತುಂಬಿರುವ ಬಂದೇ ಬರ್ತಾಳೆ ಚಿತ್ರ ಕೂಡ ಈ ವಾರ ತೆರೆಕಾಣಲಿದೆ. ಸೂರ್ಯ ಚಿತ್ರದ ನಾಯಕನಾಗಿದ್ದು, ಸಂತೋಷ್ ಮತ್ತು ಸುಪ್ರಿತಾ ಕೂಡ ಅಭಿನಯಿಸಿದ್ದಾರೆ. ಹದಿಹರೆಯದ ಯುವಕ ಯುವತಿಯರ ಸುತ್ತ ಸುತ್ತುವ ಕಥಾನಕ ಚಿತ್ರ ಇದಾಗಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದು ನಿರ್ಮಾಪಕ ಮತಾಮಾ ರೆಡ್ಡಿ ಹೇಳಿದ್ದಾರೆ. ದೇವದಾಸ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada