»   » ನಂದಿಬೆಟ್ಟದಲ್ಲಿ ಡಯಾನ ಪ್ರೇಮಯಾನ

ನಂದಿಬೆಟ್ಟದಲ್ಲಿ ಡಯಾನ ಪ್ರೇಮಯಾನ

Posted By:
Subscribe to Filmibeat Kannada

ಬೆಂಗಳೂರಿಗೆ ಸಮೀಪವಿರುವ ನಂದಿಬೆಟ್ಟದಲ್ಲಿ ಡಯಾನ ಹಾಗೂ ಆಕೆಯ ಪ್ರಿಯತಮನ ನಡುವೆ ಪ್ರೇಮಮಯ ಸನ್ನಿವೇಶಗಳನ್ನು ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಕವಿರಾಜೇಶ್ ಕವಿ ಕ್ರಿಯೇಟರ‍್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಡಯಾನ' ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

ರಾಜರಾಜೇಶ್ವರಿನಗರದ ಕೈಪು ಹೌಸ್, ಮೈಸೂರು ರಸ್ತೆಯ ಹೈಟೆಕ್ ಆಸ್ಪತ್ರೆ ಸೇರಿದಂತೆ ನಗರದ ಹಲವೆಡೆ ಚಿತ್ರದ ಚಿತ್ರೀಕರಣ ನಡೆದಿದೆ. ಧ್ರುವ, ಸಂಗೀತಾಶೆಟ್ಟಿ, ಸನಾತನಿ, ಚಿತ್ರಾಶೆಣೈ, ಪ್ರಮೀಳಾಜೋಷಾಯಿ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ ಕಲಾವಿದರು. ಈ ತಿಂಗಳ 25ರಿಂದ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಎರಡು ಹಾಡುಗಳು ಕಲ್ಯಾಣನಗರಿಯಲ್ಲೇ ಚಿತ್ರೀಕರಣಗೊಳ್ಳಲಿದೆ.

ಗೆದ್ದು ಬಾ ಇಂಡಿಯಾ ಎಂಬ ಘೋಷಣೆಯೊಂದಿಗೆ ಒಲಂಪಿಕ್ ಕ್ರೀಡಾಕೂಟದ ಕಥೆಯನ್ನಾಧರಿಸಿದ 'ಡಯಾನ' ಚಿತ್ರಕ್ಕೆ ಕವಿರಾಜೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಐದು ಗೀತೆಗಳನ್ನೊಳಗೊಂಡಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಒಂದು ಗೀತೆಗೆ ಹೈದರಾಬಾದ್‌ನ ರಮ್ಯ ಹೆಜ್ಜೆ ಹಾಕಲಿದ್ದಾರೆ.

ಎಂ.ಆರ್.ಚೌಹಾಣ್ ಛಾಯಾಗ್ರಹಣ, ಶ್ರೀನಿವಾಸ ಪಿ ಬಾಬು ಸಂಕಲನ, ಮತ್ತು ಥಾಮಸ್ ಅವರ ನಿರ್ಮಾಣನಿರ್ವಹಣೆ 'ಡಯಾನ ಚಿತ್ರಕ್ಕಿದೆ. ಧ್ರುವ, ಸಂಗೀತಾ ಶೆಟ್ಟಿ, ಸನಾತನಿ, ಪ್ರಮೀಳಾಜೋಷಾಯಿ, ಡಾ:ಶರ್ಮ, ಚಿತ್ರಾಶೆಣೈ, ಡಿಂಗ್ರಿನಾಗರಾಜ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada