»   »  ಯುಗಾದಿಗೆ ಕನ್ನಡದ ಕಿರಣ್ ಬೇಡಿಯ ರಸದೌತಣ

ಯುಗಾದಿಗೆ ಕನ್ನಡದ ಕಿರಣ್ ಬೇಡಿಯ ರಸದೌತಣ

Subscribe to Filmibeat Kannada
Malashri in Kiran Bedi film
ಕೋಟಿ ನಿರ್ಮಾಪಕ ಎಂದೇ ಖ್ಯಾತರಾದ ರಾಮು ನಿರ್ಮಾಣದ 'ಕನ್ನಡದ ಕಿರಣ್ ಬೇಡಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಯುಗಾದಿಯ ಶುಭದಿನದಂದು ತೆರೆ ಕಾಣುತ್ತಿರುವ ಈ ಚಿತ್ರ ನೋಡುಗರಿಗೆ ಮುದ ನೀಡಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಹಲವು ವರ್ಷಗಳ ಕಾಲ ಅಭಿನಯದಿಂದ ದೂರ ಸರಿದಿದ್ದ ಮಾಲಾಶ್ರೀ ಈ ಚಿತ್ರದ ನಾಯಕಿ. ಒಂದು ಕಾಲದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರವನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದ ಮಾಲಾಶ್ರೀ ಪ್ರಸ್ತುತ ಈ ಚಿತ್ರದಲ್ಲೂ ದಕ್ಷ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ತರಬೇತಿ ಪಡೆದ ಅವರು ಸಾಹಸ ಸನ್ನಿವೇಶಗಳಲ್ಲಿ ನೈಜವಾಗಿ ಪಾಲ್ಗೊಂಡಿದ್ದಾರೆ. 'ದುರ್ಗಿ, 'ಚಾಮುಂಡಿಯಾದ ಮಾಲಾಶ್ರೀ ಈಗ 'ಕನ್ನಡದ ಕಿರಣ್ ಬೇಡಿ ಯಾಗಿ ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ.

ಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್ ಬೇಡಿ' ಚಿತ್ರವನ್ನು ಖ್ಯಾತ ನಿರ್ದೇಶಕ ಓಂಪ್ರಕಾಶ್‌ರಾವ್ ನಿರ್ದೇಶಿಸಿದ್ದಾರೆ. ಹಂಸಲೇಖ ಅವರು ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತ ಸಂಯೋಜಿಸಿದ್ದು, ಚಿತ್ರದ ಧ್ವನಿಸುರುಳಿಗಳು ಈಗಾಗಲೇ ಹೆಚ್ಚು ಜನಪ್ರಿಯವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಪ್ರೇಕ್ಷಕರ ಎದೆ ಝಲ್ಲೆನ್ನಿಸಲಿದ್ದಾರೆ ಮಾಲಾಶ್ರೀ
ಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada