»   »  ಸ್ವಮೇಕ್ ಉಳಿಸಿ, ರೀಮೇಕ್ ಅಳಿಸಿ ಆಂದೋಲನ

ಸ್ವಮೇಕ್ ಉಳಿಸಿ, ರೀಮೇಕ್ ಅಳಿಸಿ ಆಂದೋಲನ

Subscribe to Filmibeat Kannada
KSP president Nalluru Prasad
ಕನ್ನಡ ಚಿತ್ರರಂಗದಲ್ಲಿ ಇಂದು ರೀಮೇಕ್ ಚಿತ್ರಗಳ ಹಾವಳಿ ಹೆಚ್ಚಾಗಿದೆ. ಸ್ವಮೇಕ್ ಚಿತ್ರಗಳು ಕಡಿಮೆಯಾಗುತ್ತಿವೆ. ಇದರಿಂದ ಕನ್ನಡದ ಸಂಸ್ಕೃತಿ ಹಾಳಾಗುತ್ತಿದೆ. ರೀಮೇಕ್ ಅಳಿಸಿ, ಸ್ವಮೇಕ್ ಉಳಿಸಿ ಆಂದೋಲನವನ್ನು ಆರಂಭಿಸ ಬೇಕು ಎಂದು 'ಅಮೃತ ಸಮಾಗಮ' ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ನ ಕುವೆಂಪು ಸಭಾಂಗಣದಲ್ಲಿ 'ಅಮೃತ ಸಮಾಗಮ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ, ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್, ಕನ್ನಡ ಚಿತ್ರರಂಗದಲ್ಲಿ ಕನ್ನಡದ್ದೇ ಆದ ಕತೆಗಳನ್ನು ಒದಗಿಸುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಯೋಜನೆಯೊಂದನ್ನು ರೂಪಿಸಲಿದೆ ಎಂದರು. ಕನ್ನಡದಲ್ಲಿ ಕತೆಗಳೇ ಇಲ್ಲ ಆದ ಕಾರಣ ರೀಮೇಕ್ ಚಿತ್ರಗಳನ್ನು ಮಾಡುತ್ತ್ತಿದ್ದೇವೆ ಎಂದು ದೂರುತ್ತಿದ್ದ ನಿರ್ಮಾಪಕರಿಗೆ ಅವರು ತಕ್ಕ ಉತ್ತರ ಕೊಟ್ಟರು.

ಇಷ್ಟು ದಿನಗಳ ಕಾಲ ಕನ್ನಡ ಚಿತ್ರರಂಗದೊಂದಿಗೆ ಸಾಹಿತ್ಯ ಪರಿಷತ್ತು ಅಂತರ ಉಳಿಸಿಕೊಂಡಿತ್ತು. ಇನ್ನ್ನು ಮುಂದೆ ಚಿತ್ರರಂಗದ ಸಾಹಿತ್ಯದ ಬಗ್ಗೆಯೂ ಗಮನಹರಿಸುತ್ತೇವೆ. ಚಿತ್ರರಂಗದ ಸಾಹಿತಿಗಳು ಮತ್ತು ಸಾಹಿತ್ಯ ಪರಿಷತ್ ಕೈ ಜೋಡಿಸಿ 'ಕನ್ನಡ ಕಥಾ ಕಣಜ' ವೊಂದನ್ನು ಆರಂಭಿಸುವುದಾಗಿ ನಲ್ಲೂರು ಪ್ರಸಾದ್ ಹೇಳಿದರು.

ಅಮೃತ ಸಮಾಗಮ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕ ಹಂಸಲೇಖಾ ಮತ್ತು ನಿರ್ದೇಶಕ ರತ್ನಜ ಸಂಯೋಜಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು, ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಪುಸ್ತಕ ಪ್ರಾಧಿಕಾರ, ವಾರ್ತಾ ಇಲಾಖೆ, ನಿರ್ಮಾಪಕರ ಸಂಘ, ದಿಯಾ ಪ್ರೊಡಕ್ಷನ್ಸ್ ಮತ್ತು ಪತ್ರಕರ್ತರು ಆಯೋಜಿಸಿದ್ದರು. ಸಭೆಯಲ್ಲಿ ಹೊರಹೊಮ್ಮಿದ ಅಭಿಪ್ರಾಯಗಳು ಸಂಕ್ಷಿಪ್ತವಾಗಿ....

ಹಂಸಲೇಖ(ಸಂಗೀತ ನಿರ್ದೇಶಕ): ಕನ್ನಡ ಚಿತ್ರಗಳಲ್ಲಿ ಕನ್ನಡ ವಾತಾವರಣ ಮೂಡುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ಸ್ವಮೇಕ್ ಉಳಿಸಿ, ರೀಮೇಕ್ ಅಳಿಸಿ ಆಂದೋಲನವಾಗಬೇಕು.

ಸಿದ್ದಲಿಂಗಯ್ಯ(ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ):ಕನ್ನಡ ಚಿತ್ರರಂಗ ತನ್ನತನವನ್ನು ಉಳಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಇವರೆಲ್ಲಾ ಚಿತ್ರರಂಗದಲ್ಲಿ ಪ್ರವಹಿಸಬೇಕು.

ಗಂಗಾಧರ ಮೊದಲಿಯಾರ್ (ಪ್ರಜಾವಾಣಿ ಸುದ್ದಿ ಸಂಪಾದಕ): ಚಿತ್ರರಂಗ ಮತ್ತು ಸಾಹಿತಿಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಬರೀ ಅನುವಾದಕರಿಗೆ ಮಣೆಹಾಕಲಾಗುತ್ತಿದೆ. ಮೂಕಿ ಚಿತ್ರಗಳ ಕಾಲದಲ್ಲಿದ್ದ ಸಾಹಿತ್ಯ ಸಂಬಂಧ ಇಂದು ಕಾಣೆಯಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಾಪ್ಲಿನ್ ಪ್ರತಿಮೆ
ಐಪಿಎಲ್ ಪಂದ್ಯಗಳಿಗೆ ಕನ್ನಡ ತಾರೆಗಳ ಚಿಯರ್ಸ್!
ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಮುಂಗಾರು ಮಳೆ ಛಾಯಾಗ್ರಾಹಕ ಕೃಷ್ಣ ತೆಲುಗಿಗೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada