For Quick Alerts
  ALLOW NOTIFICATIONS  
  For Daily Alerts

  ಪೈರಸಿ ತಡೆಗೆ ಕಣಕ್ಕಿಳಿದ ಉಪೇಂದ್ರ ಸೂಪರ್ ಪಡೆ

  By Rajendra
  |

  ಸೂಪರ್ ಚಿತ್ರದ ಧ್ವನಿಸುರುಳಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದರ ಹಾಡುಗಳು ಕೆಲವು ಅಂತರ್ಜಾಲ ತಾಣಗಳಿಗೆ ಸೇರ್ಪಡೆಯಾಗಿವೆ. ಅಲ್ಲಿಂದ ಉಚಿತವಾಗಿ ಹಾಡುಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಕಲ್ಪಿಸಿವೆ. ಇದರ ಒಟ್ಟಾರೆ ಪರಿಣಾಮ ಎಂದರೆ, 'ಸೂಪರ್' ಚಿತ್ರದ ಧ್ವನಿಸುರುಳಿ ಮಾರಾಟಕ್ಕೆ ಭಾರಿ ಹೊಡೆತ ಬಿದ್ದಿರುವುದು.

  ಈ ಸಂಬಂಧ ಆಕಾಶ್ ಆಡಿಯೋ ಮಾಲೀಕ ಮಧು ಬಂಗಾರಪ್ಪ ಹಾಗೂ ಚಿತ್ರದ ನಿರ್ದೇಶಕ ರಾಕ್ ಲೈನ್ ವೆಂಕಟೇಶ್ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿ ದೂರು ನೀಡಿದ್ದಾರೆ. ಪೈರಸಿ ವಿರುದ್ಧ ಸಿಡಿದೆದ್ದಿರುವ ಸೂಪರ್ ಚಿತ್ರತಂಡ ಅದನ್ನು ತಡೆಗಟ್ಟಲು ಸೂಪರ್ ಪಡೆಯನ್ನು ರಚಿಸಿದೆ. ಅದಕ್ಕೆ 'ಸೂಪರ್ ಸ್ಕ್ವಾಡ್ 25' ಎಂದು ಹೆಸರಿಟ್ಟಿದೆ.

  ಅಂತರ್ಜಾಲ ತಾಣಗಳಾದ Musicmaza.com, Kannadaaudio.com, Bangalore living.com ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕೇಸನ್ನು ದಾಖಲಿಸಿಕೊಂಡಿದ್ದಾರೆ ಎಂದು ಮಧು ಬಂಗಾರಪ್ಪ ವಿವರ ನೀಡಿದ್ದಾರೆ. ಈ ಸೂಪರ್ ಪಡೆಯ ಕೆಲಸ ಏನೆಂದರೆ, ಎಲ್ಲೆಲ್ಲಿ ನಕಲಿ ಸಿಡಿಗಳು ತಯಾರಾಗುತ್ತಿರುತ್ತವೋ ಅಲ್ಲಿ ದಿಢೀರ್ ದಾಳಿ ಮಾಡುವುದು. ಪೈರಸಿಯನ್ನು ಮೂಲದಲ್ಲೇ ಚಿವುಟಿ ಹಾಕುವುದು. ಪೈರಸಿ ಮಾಡುವವರಿಗೆ ತಕ್ಕ ಶಾಸ್ತಿ ಮಾಡುವುದು.

  ಈ ತಂಡದ ಜೊತೆ ನುರಿತ ಕಾನೂನು ತಜ್ಞರೊಬ್ಬರು ಇರುತ್ತಾರೆ. ಅಂತರ್ಜಾಲದಲ್ಲಿ ಪೈರಸಿಯನ್ನು ತಡೆಗಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಒಟ್ಟಿನಲ್ಲಿ ನಮ್ಮ ಸೂಪರ್ ಪಡೆ ಅಂತರ್ಜಾಲದ ಮೇಲೂ ಒಂದು ಕಣ್ಣಿಟ್ಟಿರುತ್ತದೆ ಎನ್ನುತ್ತಾರೆ ರಾಕ್ ಲೈನ್ ವೆಂಕಟೇಶ್. ಕಾದು ನೋಡೋಣ ಮುಂದೇನಾಗುತ್ತದೋ.

  English summary
  Akash Audio announced the "Super Squad 25" to counter the piracy. Producer Rockline Venkatesh and Madhu Bangarappa, the owner of Akash Audios, are now holding operations against the piracy of Super music after the songs of the film hit the net soon after its release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X