»   »  ಪೊರ್ಕಿಯಾಗಿ ದರ್ಶನ್,ಏಪ್ರಿಲ್‌ನಿಂದ ಚಿತ್ರೀಕರಣ

ಪೊರ್ಕಿಯಾಗಿ ದರ್ಶನ್,ಏಪ್ರಿಲ್‌ನಿಂದ ಚಿತ್ರೀಕರಣ

By: *ಜಯಂತಿ
Subscribe to Filmibeat Kannada
Telugu and Tamil Pokiri is Porkhi in Kannada
ಪತ್ರಕರ್ತ ಗಣೇಶ್ ಕಾಸರಗೋಡು ತೊದಲುತ್ತಿದ್ದರು. ಬಂಡೆದ್ದ ಸುಖ-ದುಃಖ ಬೆರೆತ ದನಿ ಅವರದ್ದು. ಅದು 'ಪೊರ್ಕಿ' ಚಿತ್ರದ ಸುದ್ದಿಗೋಷ್ಠ್ಠಿಯ ಹೈಲೈಟ್.

ನಾಯಕ ದರ್ಶನ್ ಬರಲಿಲ್ಲ. ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ಒಂದು ಫೋನ್ ಬಂದದ್ದೇ ಬೆಚ್ಚಿ, ಮನೆಗೆ ಹೊರಟುಹೋಗಿದ್ದರು. ಕಾರ್ಯಕಾರಿ ನಿರ್ಮಾಪಕ ಸಂತೋಷ್ ಪೈ ಹಾಗೂ ಫೈನಾನ್ಶಿಯರ್ ಕೆ.ರಮೇಶ್ ಬಾಬು ಅವರಷ್ಟೇ ಇದ್ದದ್ದು. ಸಂಪೂರ್ಣವಾಗಿ ಮಾತಾಡಿದ್ದು ಗಣೇಶ್.

ರಾತ್ರಿ ಹೊತ್ತು ಸುದ್ದಿಗೋಷ್ಠಿ ಕೂಡದು ಎಂದು ನಿರ್ಮಾಪಕರ ಸಂಘ ಹೊರಡಿಸಿದ್ದ ಫರ್ಮಾನು ಶುಕ್ರವಾರ(ಜ.23) ಸಂಪೂರ್ಣ ಉಲ್ಲಂಘನೆಯಾಗುವ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಯಿತು. ನಿರ್ಮಾಪಕರ ಸಂಘ ಈ ವಿಷಯದ ಕುರಿತು ಪಟ್ಟನ್ನು ಬಿಗಿಗೊಳಿಸಿದೆ ಅನ್ನೋದಕ್ಕೆ ಇದು ಉದಾಹರಣೆ. ಸುದ್ದಿಗೋಷ್ಠಿ ಮುಗಿಯುವ ಮುನ್ನವೇ ಶನಿವಾರ ರಾತ್ರಿ ನಡೆಯಬೇಕಿದ್ದ 'ಜೊತೆಗಾರ' ಚಿತ್ರದ ಪ್ರೆಸ್ ಮೀಟೂ ಭಾನುವಾರ ಸಂಜೆಗೆ ಮುಂದಕ್ಕೆ ಹೋದ ಸುದ್ದಿ ಹೊರಬಿತ್ತು. ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಕೂಡ ಸಂಘದ ಎಚ್ಚರಿಕೆಗೆ ಮಣಿದಿದ್ದಾರೆ ಅನ್ನೋದಕ್ಕೆ ಇದು ಕನ್ನಡಿ.

ತೆಲುಗಿನ 'ಪೋಕಿರಿ' ಚಿತ್ರದ ರೀಮೇಕ್ 'ಪೊರ್ಕಿ'. ಸಾಕಷ್ಟು ಸರ್ವೆ ಮಾಡಿದ ನಂತರ ದರ್ಶನ್ ಇದಕ್ಕೆ ಸೂಕ್ತ ಎಂದು ಗಣೇಶ್ ತೀರ್ಮಾನಿಸಿದ್ದು. ಚಿತ್ರಕ್ಕೆ ಖುದ್ದು ಗಣೇಶ್ ಸ್ಕ್ರಿಪ್ಟ್ ಸಿದ್ದಪಡಿಸಿದ್ದಾರೆ. ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲಿದೆ. ಏಪ್ರಿಲ್‌ನಿಂದ ಚಿತ್ರೀಕರಣ ಶುರು. ಯುಗಾದಿ ಹೊತ್ತಿಗೆ ಮುಹೂರ್ತ. ನಾಯಕಿ ಇನ್ನೂ ಗೊತ್ತಾಗಿಲ್ಲ. ಸಂಗೀತ ನಿರ್ದೇಶನ ಹರಿಕೃಷ್ಣ ವಹಿಸಿಕೊಂಡಿದ್ದಾರೆ. ಕೃಷ್ಣಕುಮಾರ್ ಕ್ಯಾಮೆರಾ ಹಿಡಿದು ನಿಲ್ಲಲಿದ್ದಾರೆ. ಎಂ.ಡಿ.ಶ್ರೀಧರ್ ನಿರ್ದೇಶಕನ ಕ್ಯಾಪ್ ತೊಡಲಿರುವ ಈ ಸಿನಿಮಾ ಕುರಿತು ತಂಡಕ್ಕೆ ಭಾರೀ ವಿಶ್ವಾಸವಿದೆ.

ನಿರ್ಮಾಪಕರ ಸಂಘ ಪಟ್ಟು ಸಡಿಲಿಸದೇ ಇದ್ದರೂ ಸುದ್ದಿಗೋಷ್ಠಿ ನಡೆಸುವ ಮೂಲಕ ಗಣೇಶ್ ಕಾಸರಗೋಡು ಸಾಂಕೇತಿಕ ಪ್ರತಿಭಟನೆ ನಡೆಸಿದಂತಾಯಿತು. ಪತ್ರಕರ್ತರಾದ ಸದಾಶಿವ ಶೆಣೈ ಹಾಗೂ ವಿಜಯ ಸಾರಥಿ ನಿರ್ಮಾಪಕರ ಸಂಘದ ಧೋರಣೆಯನ್ನು ಅನೌಪಚಾರಿಕ ಮಾತುಕತೆಯಲ್ಲಿ ಖಂಡಿಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada