»   »  ಜಯಮಾಲಾ ರಾಜೀನಾಮೆಗೆ ಹರೀಶ್ ಆಗ್ರಹ

ಜಯಮಾಲಾ ರಾಜೀನಾಮೆಗೆ ಹರೀಶ್ ಆಗ್ರಹ

Subscribe to Filmibeat Kannada
Bha.Ma. Harish urges for Jayamala resignation
ಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ತೋರಿದ ನಿರ್ಲಕ್ಷ್ಯತನದ ವಿರುದ್ಧ ಕನ್ನಡ ಚಲನಚಿತ್ರಸಂರಕ್ಷಣಾ ವೇದಿಕೆ ಕಿಡಿಕಾರಿದೆ.

ಕನ್ನಡ ಚಿತ್ರರಂಗದ ಹಿರಿಯ ಖಳ ನಟರ ಮಕ್ಕಳು ತಮ್ಮ ತಂದೆಯವರ ಪುಸ್ತಕಗಳನ್ನು ಪ್ರಕಟಿಸದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಖಳ ಪಾತ್ರಗಳಿಗೆ ಜೀವ ತುಂಬುತ್ತಿದ್ದ ತೂಗುದೀಪ ಶ್ರೀನಿವಾಸ್, ಸುಂದರಕೃಷ್ಣ ಅರಸ್, ದಿನೇಶ್, ಸುದೀರ್...ಮುಂತಾದ ಕಲಾವಿದರಿಗೆ 75 ಪುಸ್ತಕಗಳ ಪಟ್ಟಿಯಲ್ಲಿ ಏಕೆ ಸ್ಥಾನ ನೀಡಲಿಲ್ಲ ಎಂದು ಪ್ರಶ್ನಿಸಿ ಮಾರ್ಚ್ 9ರಂದು ಡಾ.ಜಯಮಾಲಾರನ್ನು ಭೇಟಿ ಮಾಡಿ ತಮಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದರು.

ಆದರೆ ಅನ್ಯಾಯದ ಬಗ್ಗೆವಿಚಾರಿಸಲು ಹೋದ ದರ್ಶನ್ ಬಳಗವನ್ನು ಕಡೆಗಣಿಸಲಾಗಿದ್ದು, ಇದರಿಂದ ಚಿತ್ರೋದ್ಯಮವೇ ತಲೆ ತಗ್ಗಿಸುವಂತಾಗಿದೆ. ಹಿರಿಯ ನಟಿ ಲೀಲಾವತಿ ಕುಟುಂಬಕ್ಕೂ ಅನ್ಯಾಯ ಮಾಡಲಾಗಿದೆ. ಆದ್ದರಿಂದ ನೈತಿಕ ಹೊಣೆಹೊತ್ತು ಜಯಮಾಲಾ ಅವರುಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವೇದಿಕೆ ಅಧ್ಯಕ್ಷ ಭಾ.ಮಾ.ಹರೀಶ್ ಆಗ್ರಹಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!
ಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada