ಚಿತ್ರೋದ್ಯಮ ಬೆಳೆಗೆ ಪೈರಸಿ ನುಸಿ ಕಾಟ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್,ಚಿತ್ರೋದ್ಯಮದ ಗಣ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗೃಹ ಸಚಿವರೊಂದಿಗೆ ಸಭೆ ನಡೆಸಿ ಪೈರಸಿಯನ್ನು ಬೇರು ಮಟ್ಟ ಕಿತ್ತೊಗೆಯಲು ತೀರ್ಮಾನಿಸಿದರು. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಈಗಾಗಲೆ ಪೈರಸಿಯನ್ನುತಡೆಯಲು ಕಾಯಿದೆಗಳಿವೆ. ಇಲ್ಲೂ ಆ ರೀತಿಯ ಕಾಯಿದೆಯನ್ನು ಜಾರಿಗೆ ತರಬೇಕು ಎಂಬುದು ಕನ್ನಡ ಚಿತ್ರೋದ್ಯಮದ ಬೇಡಿಕೆ. ಈ ಬೇಡಿಕೆಗೆ ಸರ್ಕಾರ ತಲೆದೂಗಿದೆ.
ಪೈರಸಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಸಂಬಂಧ ಬೆಂಗಳೂರಿನ ಒಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಫಾಸ್ಟ್ ಟ್ರಾಕ್ ನ್ಯಾಯಾಲಯವಾಗಿ ಮಾರ್ಪಡಿಸಲು ಸರ್ಕಾರ ಉದ್ದೇಶಿಸಿದೆ. ಟೂರಿಂಗ ಟಾಕೀಸ್ ಗಳ ಪರವಾನಗಿಯನ್ನು ಎರಡು ವರ್ಷದ ಬದಲಾಗಿ ಮೂರು ವರ್ಷಕ್ಕೊಮ್ಮೆ ನವೀಕರಣಗೊಳಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಚಿತ್ರೋದ್ಯಮದ ಈ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ನ್ಯಾಯಯುತವಾಗಿ ಸ್ಪಂದಿಸಬೇಕಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ ಸಿನಿಮಾ kannada movies ಡಾ.ಜಯಮಾಲಾ dr.jayamala ಪೈರಸಿ ಕಾಯಿದೆ ಗೂಂಡಾ ಕಾಯಿದೆ ಕೆ ಎಫ್ ಸಿಸಿ ಸಿನಿಮಾಟೋಗ್ರಫಿ ಕಾಯಿದೆ piracy act kfcc dr. acharya kannada film industry cinematography act1964


Click it and Unblock the Notifications