»   »  ದಿಲ್ಲಿಗೆ ಹಾರಿದ ಯೋಗರಾಜ ಭಟ್ಟರ ಗಾಳಿಪಟ

ದಿಲ್ಲಿಗೆ ಹಾರಿದ ಯೋಗರಾಜ ಭಟ್ಟರ ಗಾಳಿಪಟ

Posted By:
Subscribe to Filmibeat Kannada

ಕರ್ನಾಟಕ ಸರ್ಕಾರವಾರ್ತಾ ಇಲಾಖೆ, ಕರ್ನಾಟಕ ವಾರ್ತಾ ಕೇಂದ್ರ (ನವದೆಹಲಿ) ಹಾಗೂ ದೆಹಲಿ ಕರ್ನಾಟಕ ಸಂಘ, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯ ದಶಮಿ ಅಂಗವಾಗಿ ಕನ್ನಡ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ದೆಹಲಿ ಕನ್ನಡಿಗರು ಗಾಳಿಪಟ, ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರವನ್ನು ಮತ್ತೊಮ್ಮೆ ನೋಡಿ ಆನಂದಿಸಬಹುದು.

ಸೆಪ್ಟೆಂಬರ್ 26ರಂದು ಶನಿವಾರ ದೆಹಲಿ ಕರ್ನಾಟಕ ಸಂಘದ ಸಭಾಂಗಣ,ರಾವ್ ತುಲಾರಾಂ ಮಾರ್ಗ್, ಸೆ. 12, ಆರ್.ಕೆ. ಪುರಂ, ನವದೆಹಲಿ- 110022, ಈ ವಿಳಾಸದಲ್ಲಿ ಮಧ್ಯಾಹ್ನ 4 ಗಂಟೆಗೆ ಸರಿಯಾಗಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ 'ಮಾತಾಡ್ ಮಾತಾಡು ಮಲ್ಲಿಗೆ' ಪ್ರದರ್ಶನವಾಗಲಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರವನ್ನು ಕೆ.ಮಂಜು ನಿರ್ಮಿಸಿದ್ದಾರೆ. ರೈತರ ಸಂಕಷ್ಟಗಳ ಕಥಾಹಂದರವನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ.

ಸೆ.26ರ ರಾತ್ರಿ 6.30ಕ್ಕೆ ಗಣೇಶ್ ಮತ್ತು ಡೈಸಿ ಬೋಪಣ್ಣ ಅಭಿನಯಿಸಿದ 'ಗಾಳಿಪಟ' ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಯೋಗರಾಜ ಭಟ್ ನಿರ್ದೇಶನದ ಈ ಚಿತ್ರವನ್ನು ಎನ್.ಸೂರ್ಯ ಪ್ರಕಾಶ್ ಮತ್ತು ಎಂ ರತ್ನಂ ನಿರ್ಮಿಸಿದ್ದಾರೆ. ಜಾಲಿ ಹುಡುಗರು ಹೇಗೆ ಪ್ರೇಮದ ಬಲೆಗೆ ಬೀಳುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಿ ಮತ್ತೊಮ್ಮೆ ಆನಂದಿಸ ಬಹುದು!

ಹೆಚ್ಚಿನ ಮಾಹಿತಿಗೆ:
ಉಪ ನಿರ್ದೇಶಕರು
ಕರ್ನಾಟಕ ವಾರ್ತಾ ಕೇಂದ್ರ
ಕರ್ನಾಟಕ ಭವನ 2, ನಂ. 6. ಸರ್ದಾರ್ ಪಟೇಲ್ ಮಾರ್ಗ್, ಚಾಣಕ್ಯಪುರಿ, ನವದೆಹಲಿ 110021.
ದೂರವಾಣಿ: 011-24102263; ಮೊಬೈಲ್: +91-99686 52139

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada