»   »  ಸಂಜನಾ ,ವಿರಾಟ್ ಕೋಹ್ಲಿ ನಡುವಿನ ಕೆಮಿಸ್ಟ್ರಿ ಏನು?

ಸಂಜನಾ ,ವಿರಾಟ್ ಕೋಹ್ಲಿ ನಡುವಿನ ಕೆಮಿಸ್ಟ್ರಿ ಏನು?

Subscribe to Filmibeat Kannada
Sanjana
'ಗಂಡ ಹೆಂಡತಿ' ಚಿತ್ರದಲ್ಲಿ ನಟಿಸಿದ್ದ ಸಂಜನಾ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ಬ್ಯಾಟ್ಸ್ ಮನ್ ವಿರಾಟ್ ಕೋಹ್ಲಿ ನಡುವೆ ಪ್ರೇಮಾಂಕುರವಾಗಿದೆಯೇ? ಸ್ಯಾಂಡಲ್ ವುಡ್ ನಲ್ಲಿ ಹಾಗಂತ ಒಂದು ಸಖತ್ ಹಾಟ್ ಸುದ್ದಿ ಹಬ್ಬಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಜನಾ ಮತ್ತು ಕೋಹ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪಾರ್ಟಿಯೊಂದರಲ್ಲಿ ಒಟ್ಟಿಗೆ ಇದ್ದ ಇವರಿಬ್ಬರನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾಗಳಲ್ಲಿ ಬಂಧಿಸುವ ವಿಫಲ ಪ್ರಯತ್ನ ಮಾಡಿದ್ದರು. ಕ್ಯಾಮೆರಾ ಹಿಡಿದು ಬಂದಿದ್ದ ಛಾಯಾಗ್ರಾಹಕರಿಗೆ ಇವರಿಬ್ಬರೂ ಮುಖ ಕೊಡದೆ ನಿರಾಸೆ ಮೂಡಿಸಿದ್ದರು. ಹಾಗಾಗಿ ಇವರಿಬ್ಬರ ನಡುವಿನ ರಸಾಯನಶಾಸ್ತ್ರ ಏನು ಎಂದು ಗೊತ್ತಾಗಿಲ್ಲವಂತೆ.

ಈ ಬಗ್ಗೆ ಸಂಜಾನಾರನ್ನು ಕೇಳಿದರೆ, ಅವರು ಬಿದ್ದುಬಿದ್ದು ನಗುತ್ತಾ ಹೇಳಿದಿಷ್ಟು. ಕಳೆದ ಒಂದು ವರ್ಷದಿಂದ ವಿರಾಟ್ ನನಗೆ ಗೊತ್ತು. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್. ಜಾಹೀರಾತುಗಳಲ್ಲಿ ನಟಿಸಬೇಕಾಗಿರುವುದರಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದು ಮಾಮೂಲು. ನಮ್ಮಿಬ್ಬರ ನಡುವೆ ಸ್ನೇಹ ಸಂಬಂಧ ಹೊರತುಪಡಿಸಿದರೆ ಇನ್ನೇನು ಇಲ್ಲ ಎಂದು ವಿರಾಮ ಚಿಹ್ನೆಇಟ್ಟು ಸಿನಿ ಪತ್ರಕರ್ತರ ಮುಖದಲ್ಲಿ ಆಶ್ಚರ್ಯ ಚಿಹ್ನೆ ಮೂಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗಂಡಹೆಂಡತಿ ಖ್ಯಾತಿಯ ಸಂಜನಾ ಮತ್ತೆ ಗಾಂಧಿನಗರಕ್ಕೆ
ಸಂಗೀತ ನಿರ್ದೇಶಕರಿಗೆ ಲಹರಿ ವೇಲು ಛೀಮಾರಿ
ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!
ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada