»   »  ನಟಿ ಸರೋಜಾದೇವಿಗೆ ಕಲೈ ಮಾಮಣಿ ಪ್ರಶಸ್ತಿ

ನಟಿ ಸರೋಜಾದೇವಿಗೆ ಕಲೈ ಮಾಮಣಿ ಪ್ರಶಸ್ತಿ

Subscribe to Filmibeat Kannada
Kalaimamani B Saroja Devi
ಬಹುಭಾಷಾ ನಟಿ ಬಿ.ಸರೋಜಾ ದೇವಿ ಅವರಿಗೆ ತಮಿಳುನಾಡು ಸರ್ಕಾರದ ಪ್ರತಿಷ್ಠಿತ ಕಲೈಮಾಮಣಿ ಪ್ರಶಸ್ತಿ ಲಭಿಸಿದೆ. ನಟಿಯರಾದ ನಯನ ತಾರಾ, ಅಸಿನ್, ಮೀರಾ ಜಾಸ್ಮಿನ್ ಮತ್ತು ಭರತ ನಾಟ್ಯ ಕಲಾವಿದೆ ಐಶ್ವರ್ಯ ರಜನಿಕಾಂತ್ ಸೇರಿದಂತೆ ಒಟ್ಟು 70 ಮಂದಿ ಈ ಸಾಲಿನ ಕಲೈಮಾಮಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಸಿಕ್ಕ ಬಗ್ಗೆ ಸರೋಜಾದೇವಿ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡುತ್ತಾ, ದೂರವಾಣಿ ಮೂಲಕ ಕಮಲ ಹಾಸನ್ ಪ್ರಶಸ್ತಿ ಸಿಕ್ಕ್ಕ ಬಗ್ಗೆ ತಿಳಿಸಿದಾಗ ನಂಬಲಿಕ್ಕೇ ಆಗಲಿಲ್ಲ. ತಮಿಳು ಚಿತ್ರೋದ್ಯಮ ಹಾಗೂ ಪ್ರೇಕ್ಷಕರ ಅಭಿಮಾನ ದೊಡ್ಡದು. ನಾನು ಯಾವತ್ತೂ ಪ್ರಶಸ್ತಿಗಳನ್ನು ನಿರೀಕ್ಷಿಸಿರಲಿಲ್ಲ. ಆದರೆ ಪ್ರತಿ ಸಲ ಪ್ರಶಸ್ತಿಗಳನ್ನು ಬಂದಾಗಲೂ ಖುಷಿಪಟ್ಟಿದ್ದೇನೆ. ಈ ಪ್ರಶಸ್ತಿ ನನಗೆ ವಿಶೇಷ ಸ್ಥಾನಮಾನವನ್ನು ತಂದುಕೊಟ್ಟಿದೆ. ಇದೆಲ್ಲ ದೇವರ ದಯೆ ಎಂದು ತಿಳಿದಿದ್ದೇನೆ. ಪ್ರಶಸ್ತಿ ಕೊಡುವ ಮೂಲಕ ಬಹಳಷ್ಟು ಯುವ ಪ್ರತಿಭೆಗಳನ್ನು ತಮಿಳುನಾಡು ಸರ್ಕಾರ ಗುರುತಿಸಿರುವುದು ಮೆಚ್ಚತಕ್ಕ ಸಂಗತಿ ಎಂದರು.

ಕದ್ರಿ ಗೋಪಾಲನಾಥ್, ಆರ್ ಎನ್ ಜಯಗೋಪಾಲ್, ಕನ್ನಡದಲ್ಲಿ ನಟಿಸಿದ್ದ ರಘುವರನ್ ಸೇರಿದಂತೆ ಹಲವಾರು ಕಲಾವಿದರಿಗೆ ಕಲೈ ಮಾಮಣಿ ಪ್ರಶಸ್ತಿ ವರಿಸಿತ್ತು. ಸಂಗೀತ,ಸಾಹಿತ್ಯ ಮತ್ತು ಕಲಾ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನಿಯರಿಗೆ ತಮಿಳುನಾಡು ಸರ್ಕಾರ ಕಲೈಮಾಮಣಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಜಿನಿಯ ಮೆಚ್ಚಿನ ನಾಯಕಿ ಯಾರು ಗೊತ್ತಾ?
ಅಭಿಜಾತ ಕಲಾವಿದೆ ಬಿ. ಸರೋಜದೇವಿಗೆ, ಪ್ರೀತಿಯಿಂದ
ಕೃಷ್ಣ ಸರೋಜಾದೇವಿ ಪ್ರಣಯಪ್ರಸಂಗದ 'ವಿಶ್ವ'ರೂಪ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada