»   » ಎರಡನೇ ಕೆಂಪೇಗೌಡನಾಗಿ ಸುದೀಪ್ ಭರದ ಸಿದ್ಧತೆ

ಎರಡನೇ ಕೆಂಪೇಗೌಡನಾಗಿ ಸುದೀಪ್ ಭರದ ಸಿದ್ಧತೆ

Posted By:
Subscribe to Filmibeat Kannada

ಚಿತ್ರ ರೀಮೇಕೋ ಸ್ವಮೇಕೋ ಎಂಬುದಕ್ಕಿಂತ ಬಾಕ್ಸಾಫೀಸಲ್ಲಿ ದುಡ್ಡು ಬಾಚಿದೆಯೇ ಇಲ್ಲವೇ ಎಂಬ ಅಂಶವೇ ಗಾಂಧಿನಗರದಲ್ಲಿ ಮುಖ್ಯ. 'ಕೆಂಪೇಗೌಡ' ರೀಮೇಕ್ ಚಿತ್ರವಾದರೂ ಬಾಕ್ಸಾಫೀಸಲ್ಲಿ ಜೋರಾಗಿಯೇ ಸದ್ದು ಮಾಡಿದೆ. ಎರಡೇ ವಾರದಲ್ಲಿ ಚಿತ್ರ ನಿರ್ಮಾಪಕನ ಜೇಬಿಗೆ ದುಡ್ಡು ಹರಿದು ಬರುವಂತೆ ಮಾಡಿದೆ. ವಿಶ್ವಕಪ್ ಕ್ರಿಕೆಟ್ ಬಿಸಿಯಲ್ಲೂ 'ಕೆಂಪೇಗೌಡ' ಮುನ್ನುಗ್ಗಿರುವುದು ಗಾಂಧಿನಗರ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದೆ.

ಈಗ ಇದೇ ಹುಮ್ಮಸ್ಸು, ಕೆಚ್ಚಿನಲ್ಲಿರುವ ಕಿಚ್ಚ ಎರಡನೇ ಕೆಂಪೇಗೌಡನಾಗಿ ಬರಲು ಸಿದ್ಧತೆ ನಡೆಸಿದ್ದಾನೆ. ಅಂದರೆ ಕೆಂಪೇಗೌಡ ಭಾಗ ಎರಡಕ್ಕೆ ಸುದೀಪ್ ಕೈಹಾಕಿದ್ದಾರೆ. ಮೂಲಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ಎರಡನೇ ಕೆಂಪೇಗೌಡ ಸೆಟ್ಟೇರಲಿದೆ. ಆದರೆ ಎರಡನೇ ಕೆಂಪೇಗೌಡ ಮಾತ್ರ ರೀಮೇಕ್ ಅಲ್ಲ ಎಂಬುದು ವಿಶೇಷ.

ಕೆಂಪೇಗೌಡ ಚಿತ್ರ ತಮಿಳಿನ ಯಶಸ್ವಿ ಚಿತ್ರ 'ಸಿಂಗಂ' ರೀಮೇಕ್ ಆಗಿತ್ತು. ಈಗ ಸುದೀಪ್ ಸ್ವತಂತ್ರ ಕತೆಯೊಂದನ್ನು ಕೈಗೆತ್ತಿಕೊಂಡಿದ್ದು ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಎರಡನೇ ಕೆಂಪೇಗೌಡನ ಕತೆಯನ್ನೂ ಓಕೆ ಮಾಡಿದ್ದಾರೆ. ಈ ಚಿತ್ರಕ್ಕೂ ಸುದೀಪ್ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ ಎಂಬುದು ತಾಜಾ ಸುದ್ದಿ.

English summary
Kitchcha Sudeep is planning for Kempe Gowda sequel. Sources says that Sudeep already finalised the script and the shooting will commence from September onwards. Kempe Gowda was the remake of the Tamil movie Singam, but the sequel would be an original script.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada