For Quick Alerts
  ALLOW NOTIFICATIONS  
  For Daily Alerts

  'ಮಾಯದಂಥ ಮಳೆ'ಯಲ್ಲಿ ಹುಡುಗಿ ಹುಡುಕಾಟ

  By Rajendra
  |

  ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ತಂದೆ ಮದುವೆ ಮಾಡಿಸುವುದು ಲೋಕದಲ್ಲಿ ಸಹಜ. ಆದರೆ ಇಲ್ಲಿ ಸ್ವಲ್ಪ ಬದಲಾಗಿದೆ. ಹುಡುಗಿಯೊಬ್ಬಳು ತನ್ನ ತಂದೆಗೆ ಮದುವೆ ಮಾಡಿಸುವ ಸಲುವಾಗಿ ಹುಡುಗಿ ಹುಡುಕುತ್ತಾ ಹೊರಟ್ಟಿದ್ದಾಳೆ. ಮಾರ್ಗದಲ್ಲಿ ಎಷ್ಟೋ ಹುಡುಗಿಯರು ಸಿಕ್ಕಿದರಾದರು ಅವರಾರೂ ಹೊಂದಿಕೆಯಾಗಲಿಲ್ಲ. ವಧು ಅನ್ವೇಷಣೆಯಲ್ಲಿ ಸಾಗುತ್ತಿದ್ದ ಈ ತರುಣಿಗೆ ಕೊನೆಗೂ ಒಬ್ಬ ಹುಡುಗಿ ಹಿಡಿಸುತ್ತಾಳೆ.

  ಅವಳ ಬಳಿ ಬಂದ ಈ ತರುಣಿ "ನೀವು ನೋಡಲಿಕ್ಕೆ ಸುಂದರವಾಗಿದ್ದೀರಾ. ನಮ್ಮಪ್ಪನನ್ನು ಮದುವೆ ಆಗುತ್ತೀರಾ?" ಎಂದು ಕೇಳುವ ಸನ್ನಿವೇಶವನ್ನು ಗಂಗಾಪರಮೇಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಮಾಯದಂಥ ಮಳೆ' ಚಿತ್ರಕ್ಕಾಗಿ ನಿರ್ದೇಶಕ ವೀರೇಶ್ ದೊಡ್ಡಬಳ್ಳಾಪುರ ಚಿತ್ರಿಸಿಕೊಂಡರು. ಮಲ್ಲೇಶ್ವರಂ ರಸ್ತೆಗಳಲ್ಲಿ ಚಿತ್ರೀಕರಣಗೊಂಡ ಈ ಸನ್ನಿವೇಶದಲ್ಲಿ ಭಾವನಾರಾವ್ ಹಾಗೂ ಋತು ಅಭಿನಯಿಸಿದ್ದರು.

  ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ವೀರೇಶ್ ದೊಡ್ಡಬಳ್ಳಾಪುರ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕವಿರಾಜ್, ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್ ಹಾಗೂ ಮಂಜುನಾಥರಾವ್ ರಚಿಸಿರುವ ಹಾಡುಗಳಿಗೆ ಮ್ಯೂಜಿಕ್ ಮೋಹನ್ ಸಂಗೀತ ನೀಡಿದ್ದಾರೆ.

  ಕೆರೆಮಲ್ಲು ಬದ್ರಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣ, ಕೆಂಪರಾಜ್ ಅವರ ಸಂಕಲವಿರುವ ಚಿತ್ರದ ತಾರಾಬಳಗದಲ್ಲಿ ರವಿಚೇತನ್, ಭಾವನಾರಾವ್, ರೂಪಿಕಾ, ಶರತ್‌ಬಾಬು, ಶ್ರುತಿ, ಪ್ರಕಾಶ್‌ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ರೇಖಾಕುಮಾರ್, ಹೊನ್ನವಳಿ ಕೃಷ್ಣ, ಸುಂದರಶ್ರೀ, ಋತು, ಮಿಮಿಕ್ರಿ ರಾಜಗೋಪಾಲ್ ಮುಂತಾದವರಿದ್ದಾರೆ.

  English summary
  The shooting of Shruti and Sharat Babu starer upcoming film "Mayadanta Male" is going in a vigorous speed. Currently, this film shooting progressed in Malleshwaram surroundings. This film is being produced by Keremallu Badri under ‘Ganga Parameshwari Production’ banner and music by Music Mohan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X