»   »  ಸೆಪ್ಟೆಂಬರ್ ನಲ್ಲಿ ಪ್ರೇಮ್ ಕಹಾನಿ ಬಿಡುಗಡೆ

ಸೆಪ್ಟೆಂಬರ್ ನಲ್ಲಿ ಪ್ರೇಮ್ ಕಹಾನಿ ಬಿಡುಗಡೆ

Subscribe to Filmibeat Kannada

'ರಾಜ್ ದ ಶೋ ಮ್ಯಾನ್' ನಂತರ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಪ್ರೇಮ್ ಕಹಾನಿ'. ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕಾತರ ಚಿತ್ರೋದ್ಯಮದಲ್ಲಿ ನೆಲೆಗೊಂಡಿದೆ. ಪ್ರೇಮ್ ಕಹಾನಿ ಚಿತ್ರ ತಂಡ ತಮ್ಮ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬ ನಿರೀಕ್ಷೆಯಲ್ಲಿದೆ.

ಪ್ರೇಮ್ ಕಹಾನಿ ಚಿತ್ರಕ್ಕೆಈಗಾಗಲೇ ಸೆನ್ಸರ್ ಮಂಡಳಿ 'ಯು' ಪ್ರಮಾಣ ಪತ್ರ ನೀಡಿದೆ. ಶ್ರೀಲಕ್ಷ್ಮಿ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ ಎಂ ವಿಶ್ವನಾಥ್ ಮತ್ತು ಜಿ ರವಿಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೆಪ್ಟೆಂಬರ್ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಪ್ರೇಮ್ ಕಹಾನಿಯನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ ನಿರ್ಮಾಪಕರು.

ಚಿತ್ರವನ್ನ್ನ್ನು ನೋಡಿದ ಬಳಿಕ ಪ್ರೇಕ್ಷಕರು ಭಾವನೆಗಳನ್ನು ತಮ್ಮೊಂದಿಗೆ ಹೊತ್ತೊಯ್ಯಲಿದ್ದಾರೆ ಎನ್ನ್ನುತ್ತಾರೆ ಚಿತ್ರದ ನಾಯಕ ನಟ ಅಜಯ್. ಕಣ್ಣಿಗೆ ಹಿತವೆನಿಸುವ ದೃಶ್ಯಗಳು ಮನಕ್ಕೆ ಮುದನೀಡುವ ಸನ್ನಿವೇಶಗಳು ಚಿತ್ರದಲ್ಲಿವೆ ಯಥೇಚ್ಛವಾಗಿವೆ ಎನ್ನುತ್ತಾರೆ ಅಜಯ್.

''ಶೇ.50ರಷ್ಟು ಚಿತ್ರವನ್ನು ನೈಜ ಸ್ಥಳಗಳಲ್ಲಿ ಚಿತ್ರೀಕರಿಸಿದ್ದೇವೆ. ಒಂಚೂರು ಬದಲಾವಣೆಗಳೊಂದಿಗೆ ರಾಜಾಜಿನಗರ ಮತ್ತು ಬಿಇಎಲ್ ನ ಕೊಳೆಗೇರಿಗಳಲ್ಲಿ ಚಿತ್ರೀಕರಿಸಿದ್ದೇವೆ. ಚಿತ್ರೀಕರಣಕ್ಕಾಗಿ ಬಳಸಿರುವ ಸೂಪರ್ 35 ಎಂಎಂ ಕ್ಯಾಮೆರಾದಲ್ಲಿ ಚಿತ್ತಾಕರ್ಷಕ ಸನ್ನಿವೇಶಗಳನ್ನು ಸೆರೆಹಿಡಿದಿದ್ದೇವೆ''ಎನ್ನುತ್ತಾರೆ ಛಾಯಾಗ್ರಾಹಕ ಚಂದ್ರಶೇಖರ್.

''ಜುಲೈ 31ರಂದೇ ಚಿತ್ರವನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಕಾರಾಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಪ್ರೇಮ್ ಕಹಾನಿ ನೋಡಿದ ಗಂಡಂದಿರು ಮತ್ತೊಮ್ಮೆ ತಮ್ಮ ಹೆಂಡತಿ ಜೊತೆಗೆ ಚಿತ್ರಕ್ಕೆ ಬಂದೇ ಬರುತ್ತಾರೆ. ಸಿನಿಮಾ ನೋಡಿದ ಚಿತ್ರದ ನಿರ್ಮಾಪಕರು ಮೂಕವಿಸ್ಮಿತರಾಗಿದ್ದರು. ಹದಿನೈದು ನಿಮಿಷಗಳ ಕಾಲ ಅವರ ಬಾಯಿಂದ ಮಾತೇ ಹೊರಡಲಿಲ್ಲ ಎನ್ನ್ನುತ್ತಾರೆ ನಿರ್ದೇಶಕ ಚಂದ್ರು.

ತೆಲುಗಿನ 'ಪರುಗು'ಚಿತ್ರದಲ್ಲಿ ನಟಿಸಿದ್ದ ಶೀಲಾ ಈ ಚಿತ್ರದ ನಾಯಕಿ. ಈ ಹಿಂದೆ ನಟಿಸಿದ ಚಿತ್ರಗಳಿಗಿಂತ ಪ್ರೇಮ್ ಕಹಾನಿ ವಿಭಿನ್ನ ಎನ್ನುತ್ತಾರೆ ಶೀಲಾ. ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿ ಸಾಕಷ್ಟಿವೆ. ಚಿತ್ರದ ದ್ವಿತೀಯಾರ್ಧದಲ್ಲಿ ಆಸಕ್ತಿಕರವಾಗಿದ್ದು ಕತೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎನ್ನುತ್ತಾರೆ ಶೀಲಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada