»   »  ಉಲ್ಲಾಸ ಉತ್ಸಾಹದಲ್ಲಿ ಅದ್ದೂರಿ ಹಾಡುಗಳು

ಉಲ್ಲಾಸ ಉತ್ಸಾಹದಲ್ಲಿ ಅದ್ದೂರಿ ಹಾಡುಗಳು

Subscribe to Filmibeat Kannada
Ganesh
ಚಿತ್ರ ವೈಭವೋಪೇತವಾಗಿ ಮೂಡಿ ಬರಲು ಹಾಡುಗಳು ಪ್ರಮುಖ ಪಾತ್ರವಹಿಸುತ್ತದೆ. ಕೆಲವು ಚಿತ್ರಗಳಿಗಿಂತ ಅದರ ಹಾಡುಗಳೇ ಯಶಸ್ವಿಯಾದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟಿವೆ. ಪ್ರತಿಯೊಬ್ಬ ನಿರ್ಮಾಪಕ ತನ್ನ ಚಿತ್ರದ ಗೀತೆಗಳು ಶ್ರೀಮಂತಿಕೆಯಿಂದ ಮೂಡಿಬರಲು ಮುತುವರ್ಜಿ ವಹಿಸುತ್ತಾನೆ.

ಕಾಂತಿಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಉಲ್ಲಾಸ ಉತ್ಸಾಹ' ಚಿತ್ರದ ಎರಡು ಹಾಡುಗಳು ಅದ್ದೂರಿಯಾಗಿ ಚಿತ್ರೀಕೃತವಾಗಿದೆ. ಕವಿರಾಜ್ ರಚಿಸಿರುವ ''ಹಲೋ ನಮಸ್ತೆ ಮಾಡೋಣ ಮಸ್ತಿ ಬಾ - ಮಾಮಾಮಾ ಮಾಮಾಮೈಯಾ, ದಿನವೆಲ್ಲಾ ಎಂಜಾಯ್ ಮಾಡೋಣ ಜಿಗಿದು, ಕುಣಿದು ನಲಿಯೋಣ ಬಾ''ಎಂಬ ಗೀತೆಯ ಚಿತ್ರೀಕರಣದಲ್ಲಿ ನಾಯಕ ಗಣೇಶ್ ಹಾಗೂ ಸ್ನೇಹಿತರು ಭಾಗವಹಿಸಿದರೆ ರಾಂನಾರಾಯಣ್ ರಚಿಸಿರುವ ''ಲವ್ ಮಾಡೆ ನನ್ನೇ ಕನ್ಯಾಕುಮಾರಿ ಏನ್ ಮಾಡಬೇಕು ಕೇಳೆ ಒಂದ್ಸಾರಿ'' ಎಂಬ ಗೀತೆಯ ಚಿತ್ರೀಕರಣದಲ್ಲಿ ಗಣೇಶ್ ಹಾಗೂ ನಾಯಕಿ ಯಾಮಿಗೌತಮಿ ಪಾಲ್ಗೊಂಡಿದ್ದರು.

ಈ ಎರಡು ಗೀತೆಗಳಿಗೆ ಕಲ್ಯಾಣ್ ನೃತ್ಯ ಸಂಯೋಜಿಸಿದ್ದು ಕಲ್ಕತ್ತಾ, ಮೈಸೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಚಿತ್ರೀಕೃತವಾಗಿದೆ. ಇದರೊಂದಿಗೆ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು ಉಳಿದ ಗೀತೆಗಳ ಚಿತ್ರೀಕರಣವನ್ನು ಮಾರ್ಚ್ 5ರ ನಂತರ ಆರಂಭಿಸುವುದಾಗಿ ನಿರ್ಮಾಪಕ ಬಿ.ಪಿ.ತ್ಯಾಗರಾಜು ತಿಳಿಸಿದ್ದಾರೆ.

ದೇವರಾಜ್‌ಪಾಲನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕರುಣಾಕರನ್ ಕತೆ ಬರೆದಿದ್ದಾರೆ. ಜಿ.ವಿ.ಪ್ರಕಾಶ್‌ಕುಮಾರ್ ಸಂಗೀತ, ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್, ದತ್ತಣ್ಣ ನಿರ್ಮಾಣನಿರ್ವಹಣೆ. ಚಿತ್ರದ ತಾರಾಬಳಗದಲ್ಲಿ ಗಣೇಶ್, ಯಾಮಿಗೌತಮಿ, ರಂಗಾಯಣರಘು, ಸಾಧುಕೋಕಿಲಾ, ತುಳಸಿಶಿವಮಣಿ, ಪ್ರೀತಿಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಇರುವುದು ಗೊತ್ತೇ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ
ಗಣೇಶ್ ರಿಮೇಕ್ ಚಿತ್ರಕ್ಕೆ ಆಮದು ಬೆಡಗಿ ಯಾಮಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada