»   » ಖ್ಯಾತ ಚಿತ್ರನಟ ರತ್ನಾಕರ್ ಆರೋಗ್ಯ ಸ್ಥಿತಿ ವಿಷಮ

ಖ್ಯಾತ ಚಿತ್ರನಟ ರತ್ನಾಕರ್ ಆರೋಗ್ಯ ಸ್ಥಿತಿ ವಿಷಮ

Posted By:
Subscribe to Filmibeat Kannada
Veteran film actor Rathnakar hospitalised
ಹಿರಿಯ ಕನ್ನಡಚಿತ್ರ ನಟ ಕೆ ಎಂ ರತ್ನಾಕರ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅವರನ್ನು ಕಳೆದ ಗುರುವಾರ ಮಧ್ಯರಾತ್ರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಎಂಬತ್ತರ ಆಸು ಪಾಸುನಲ್ಲಿರುವ ರತ್ನಾಕರ್ ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಮಗ ರಾಜು ರತ್ನಾಕರ್ ತಿಳಿಸಿದ್ದಾರೆ. ಆಸ್ಪತ್ರೆಗೆ ಅವರನ್ನು ದಾಖಲಿಸಿದಾಗ ಅವರ ಮೂತ್ರಪಿಂಡ ವಿಫಲವಾಗಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಉಂಟಾಗಿದೆ ಎಂದು ರಾಜು ವಿವರ ನೀಡಿದ್ದಾರೆ.

ರತ್ನಾಕರ್ ಅವರು ಕನ್ನಡದ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ನಟಿಸಿದ ಜನಪ್ರಿಯ ಚಿತ್ರಗಳೆಂದರೆ ಭಕ್ತ ಕನಕದಾಸ, ಗುರು ಶಿಷ್ಯರು, ಅಣ್ಣಯ್ಯ ಮತ್ತು ಗಡಿಬಿಡಿ ಗಂಡ. ಕುಟುಂಬ ಮೂಲಗಳ ಪ್ರಕಾರ ರತ್ನಾಕರ್ ಚಿಕಿತ್ಸೆಗೆ ಹಣಕಾಸು ಕೊರತೆ ಎದುರಾಗಿದೆ. ರತ್ನಾಕರ್ ಚಿಕಿತ್ಸೆಗೆ ಸರಕಾರ ಧನ ಸಹಾಯ ಮಾಡಿದರೆ ಅವರ ಕುಟುಂಬ ಕೊಂಚ ನಿರಾಳವಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada