For Quick Alerts
  ALLOW NOTIFICATIONS  
  For Daily Alerts

  ಉಪ್ಪಿ ಆರಕ್ಷಕ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ಯಾಕೆ?

  By Rajendra
  |

  ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಆರಕ್ಷಕ' ಚಿತ್ರ ರಾಜ್ಯದಾದ್ಯಂತ ಜ.26ರಂದು ಬಿಡುಗಡೆಯಾಗುತ್ತಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಕಾರಣ ಚಿತ್ರದಲ್ಲಿನ ಭಯಾನಕ ಕೊಲೆ ದೃಶ್ಯ.

  ಒಂದು ವೇಳೆ ಈ ಕೊಲೆ ದೃಶ್ಯ ಚಿತ್ರದಲ್ಲಿಲ್ಲದಿದ್ದರೆ ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಗುತ್ತಿತ್ತು ಎಂದಿದ್ದಾರೆ ನಿರ್ಮಾಪಕ ಕೃಷ್ಣ ಪ್ರಜ್ವಲ್. ಬೆಂಗಳೂರಿನ ಸಾಗರ್ ಚಿತ್ರಮಂದಿರದ ಮುಂದೆ ದೊಡ್ಡ ಬಾಟಲ್‌ ಮಾದರಿಯ ಕಟೌಟ್ ನಿಲ್ಲಿಸುವುದಾಗಿ ನಿರ್ಮಾಪಕರು ಹೇಳಿದ್ದರು. ಆದರೆ ಕಾರಣಾಂತರಗಳಿಂದ ಆ ರೀತಿಯ ವಿಭಿನ್ನ ಪ್ರಚಾರವನ್ನು ಕೈಬಿಟ್ಟಿದ್ದಾರೆ.

  ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಲಿದ್ದಾರೆ. ಆದಿ ಲೋಕೇಶ್ ಪಾತ್ರವೂ ವಿಭಿನ್ನವಾಗಿದ್ದು ಅವರ ವೃತ್ತಿಜೀವನದಲ್ಲಿ ಈ ಚಿತ್ರ ಮತ್ತೋಂದು ತಿರುವು ನೀಡಲಿದೆ ಎಂದಿದ್ದಾರೆ ಕೃಷ್ಣಪ್ರಜ್ವಲ್. ಅಂಡರ್ ವಾಟರ್ ಹಾಡಂತೂ ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ.

  ಈ ಚಿತ್ರ 'ಎ' ಚಿತ್ರಕ್ಕಿಂತಲೂ ಅದ್ಭುತ ಯಶಸ್ವಿಯಾಗುತ್ತದೆ. ಆರಕ್ಷಕ ಚಿತ್ರಕಥೆಯೇ ಹೀರೋ ಎಂದಿದ್ದಾರೆ ಉಪೇಂದ್ರ. ಚಿತ್ರದ ಸಂಪೂರ್ಣ ಯಶಸ್ಸು ನಿರ್ದೇಶಕ ಪಿ ವಾಸು ಅವರಿಗೆ ಸಲ್ಲುತ್ತದೆ ಎಂದಿದ್ದಾರೆ ಉಪೇಂದ್ರ. ಗುರುಕಿರಣ್ ಸಂಗೀತ ಚಿತ್ರಕ್ಕಿದ್ದು ಹಂಸಲೇಖ, ಕವಿರಾಜ್ ಹಾಗೂ ಉಪೇಂದ್ರ ಸಾಹಿತ್ಯ ಚಿತ್ರಕ್ಕಿದೆ. (ಏಜೆನ್ಸೀಸ್)

  English summary
  Why Upendra's Arakshaka gets U/A certificate? The producer of the film Krishna Prajwal disclosed that, we got U/A for murder scene said the producer. The Psychological thriller action film starring Superstar Upendra, Ragini Dwivedi and Sadha in the lead roles and is one of the most awaited Kannada films of 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X