»   » ಅಣ್ಣಾಬಾಂಡ್ ಮರುದಿನವೇ ಕಠಾರಿವೀರ ಬರಲಿದೆಯೇ?

ಅಣ್ಣಾಬಾಂಡ್ ಮರುದಿನವೇ ಕಠಾರಿವೀರ ಬರಲಿದೆಯೇ?

Posted By:
Subscribe to Filmibeat Kannada

ಅಣ್ಣಾಬಾಂಡ್ ಬಿಡುಗಡೆ ಮೇ 1, 2012 ರ ಕಾರ್ಮಿಕ ದಿನದಂದು ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ಮುನಿರತ್ನರ ಕಠಾರಿವೀರ ಸುರಸುಂದರಾಂಗಿ ಚಿತ್ರದ ಬಿಡುಗಡೆ ವಿಷಯವೀಗ ಗಾಂಧಿನಗರ ಹಾಗೂ ಕರ್ನಾಟಕದ ಸಿನಿಪ್ರೇಕ್ಷಕರಲ್ಲಿ ತೀವ್ರ ಕುತೂಲಹ ಕೆರಳಿಸಿದೆ. ನಿನ್ನೆ (25, ಏಪ್ರಿಲ್ 2012) ಅಣ್ಣಾಬಾಂಡ್ ಹಾಗೂ ಕಠಾರಿವೀರ (2D) ಈ ಎರಡೂ ಚಿತ್ರಗಳೂ ಸೆನ್ಸಾರ್ ಆಗಿ 'ಯು/ಎ' ಪ್ರಮಾಣಪತ್ರ ಪಡೆದಿವೆ.

ಸೆನ್ಸಾರ್ ನಂತರ ತಮ್ಮ ನಿರ್ಮಾಣದ ಅಣ್ಣಾಬಾಂಡ್ ಚಿತ್ರದ ಬಿಡುಗಡೆಯನ್ನು ಘೋಷಿಸಿರುವ ರಾಘವೇಂದ್ರ ರಾಜ್ ಕುಮಾರ್ "ಮೇ ಒಂದು ಕಾರ್ಮಿಕರ ದಿನ. ಅವರೆಲ್ಲರೂ ನಮ್ಮ ಚಿತ್ರ ನೋಡಿ ಖುಷಿಪಡಿಲಿ' ಎಂದಿದ್ದಾರೆ. ಆದರೆ ಉಪೇಂದ್ರ ಅಭಿಮಾನಿಗಳು ನೋಡಲು ಕಾದಿರುವ ಕಠಾರಿವೀರ ಚಿತ್ರದ ಬಿಡುಗಡೆ ಸದ್ಯಕ್ಕೆ ಸಸ್ಪೆನ್ಸ್ ಎಂಬಂತಾಗಿದೆ. ಕೆ ಮಂಜು 'ಗಾಡ್ ಫಾದರ್' ಚಿತ್ರ ಕಠಾರಿವೀರ ಬಿಡುಗಡೆಗೆ ಅಡ್ಡಗಾಲಾಗಿ ಪರಿಣಮಿಸಿದೆ.

"ನನ್ನ ಚಿತ್ರಕ್ಕೂ ಗಾಡ ಫಾದರ್ ಚಿತ್ರದ ಬಿಡುಗಡೆಗೂ ಉಪೆಂದ್ರ ನಾಯಕರು ಎಂಬುದನ್ನು ಬಿಟ್ಟರೆ ಯಾವ ಸಂಬಂಧವಿಲ್ಲ. ಕಠಾರವೀರದ '3D' ಸೆನ್ಸಾರ್ ಆದ ನಂತರ ನಾನು ನನ್ನ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇನೆ" ಎಂದು ಮುನಿರತ್ನ ಪುನರುಚ್ಛರಿಸಿದ್ದಾರೆ. ಮುನಿರತ್ನ ಮತ್ತೆ ಅಣ್ಣಾಬಾಂಡ್ ಬಿಡುಗಡೆ ಮಾರನೇ ದಿನವೇ ಕಠಾರಿವೀರ ಬಿಡುಗಡೆ ಘೋಷಿಸುತ್ತಾರಾ ಎಂಬುದೀಗ ಎಲ್ಲರ ಮನದಲ್ಲಿರುವ ಪ್ರಶ್ನೆ. ಅದಕ್ಕೆ ಉತ್ತರ ಸದ್ಯಕ್ಕೆ ಮುನಿರತ್ನರಿಗೆ ಮಾತ್ರ ಗೊತ್ತು. (ಒನ್ ಇಂಡಿಯಾ ಕನ್ನಡ)

English summary
After the announcement of Annabond Release that (May 1 2012), Everybody is curious about Munirathna's 'Katariveer Surasundarangi' release date. But, its' 2D copy Sensored and 3D has to Censore today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada