»   » ಕನ್ನಡ ಹಾಸ್ಯನಟ ರತ್ನಾಕರ್ ಆರೋಗ್ಯದಲ್ಲಿ ಚೇತರಿಕೆ

ಕನ್ನಡ ಹಾಸ್ಯನಟ ರತ್ನಾಕರ್ ಆರೋಗ್ಯದಲ್ಲಿ ಚೇತರಿಕೆ

Posted By:
Subscribe to Filmibeat Kannada
Comedy actor Rathnakar recovers gradually
ಎರಡು ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಹಿರಿಯ ಹಾಸ್ಯ ನಟ ರತ್ನಕಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ನಿಗಾ ಘಟಕದಿಂದ ಅವರನ್ನು ಸಾಮಾನ್ಯ ವಾರ್ಡಿಗೆ ವೈದ್ಯರು ವರ್ಗಾಯಿಸಿದ್ದಾರೆ.ಚಿಕಿತ್ಸೆಗೆ ರತ್ನಾಕರ್ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆಸ್ಪತ್ರೆಗೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಭೇಟಿ ನೀಡಿ ರತ್ನಾಕರ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಮಂಗಳವಾರ ಸಂಗೀತ ನಿರ್ದೇಶಕ ವಿ ಮನೋಹರ್, ರಂಗಕರ್ಮಿ ಜನ್ನಿ, ಲಕ್ಷ್ಮಣ ಹೊಸಕೋಟೆ ಅವರು ಭೇಟಿ ಮಾಡಿ ರತ್ನಾಕರ್ ಆರೋಗ್ಯದ ಬಗ್ಗೆ ವಿಚಾರಿಸಿದರು.

ಚಿತ್ರರಂಗಕ್ಕೆ ರತ್ನಾಕರ್ ಅವರ ಕೊಡುಗೆ ದೊಡ್ಡದು. ಅವರು ಆದಷ್ಟು ಬೇಗನೆ ಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಇರಲಿ. ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಹೇಳಿ ಅವರಿಗೆ ಧೈರ್ಯ ತುಂಬಿದೆವು. ಅವರು ಕಣ್ಣೀರು ಹಾಕಿದ್ದು ನಮಗೆ ನೋವು ತರಿಸಿದೆ ಎಂದು ವಿ ಮನೋಹರ್ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಎಸ್ ಎ ರಾಮದಾಸ್, ಶಂಕರ್ ಅಶ್ವತ್ಥ್ ಸೇರಿದಂತೆ ಹಲವಾರು ಮಂದಿ ಆಸ್ಪತ್ರೆಗೆ ಭೇಟಿ ನೀಡಿ ರತ್ನಾಕರ್ ಅವರ ಆರೋಗ್ಯವನ್ನು ವಿಚಾರಿಸಿದರು. ರತ್ನಾಕರ್ ಅವರು ಕನ್ನಡದ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ನಟಿಸಿದ ಜನಪ್ರಿಯ ಚಿತ್ರಗಳೆಂದರೆ ಭಕ್ತ ಕನಕದಾಸ, ಗುರು ಶಿಷ್ಯರು, ಅಣ್ಣಯ್ಯ ಮತ್ತು ಗಡಿಬಿಡಿ ಗಂಡ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada