For Quick Alerts
  ALLOW NOTIFICATIONS  
  For Daily Alerts

  ಒಳಗೆ ಸೇರಿದರೆ ಗುಂಡು ವಿದ್ಯಾ ಬಾಲನ್ ಆಗುವಳು ಗಂಡು!

  By Rajendra
  |

  ಬಾಲಿವುಡ್ ತಾರೆ ವಿದ್ಯಾ ಬಾಲನ್ ಗುಂಡು ಹಾಕಿ ತೂರಾಡಿದ ಪ್ರಸಂಗವಿದು. ಥೇಟ್ ನಮ್ಮ 'ನಂಜುಂಡಿ ಕಲ್ಯಾಣ'ದ ಮಾಲಾಶ್ರೀ ಅವರಂತೆ ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಎಂದು ಚಿತ್ರೀಕರಣದಲ್ಲಿ ತೂರಾಡಿದ್ದಾರೆ. ವಿದ್ಯಾರ ತೂರಾಟ ನೋಡಿ ನಿರ್ದೇಶಕ ಸುಜಾಯ್ ಗೋಷ್ ಕ್ಷಣಕಾಲ ದಂಗಾಗಿದ್ದಾರೆ.

  ಹಿಂದಿಯ 'ಕಹಾನಿ' ಚಿತ್ರದ ಪೋಟೋ ಶೂಟ್ ನಡೆಯುತ್ತಿದ್ದ ಸಂದರ್ಭವದು. ವಿದ್ಯಾ ಬಾಲನ್ ಎಲ್ಲಿ ಎಂದು ಕೇಳಿದ ನಿರ್ದೇಶಕರ ಮುಂದೆ ಆಕೆ ತೂರಾಡುತ್ತಾ ಬಂದು ನಿಂತರು. ಇದನ್ನು ಕಂಡ ಸುಜೋಯ್ ಕ್ಷಣಕಾಲ ತಬ್ಬಿಬ್ಬಾದರು. ಆದರೆ ಇದು ಕೇವಲ ನಟನೆ ಅಷ್ಟೆ ಎಂಬುದು ಸ್ವಲ್ಪ ಸಮಯದ ಬಳಿಕ ಅಲ್ಲಿದ್ದ ಎಲ್ಲರಿಗೂ ಮನದಟ್ಟಾಗಿದೆ! ಬಳಿಕ ಆಕೆಯ ನಟನೆಗಯನ್ನು ಎಲ್ಲರೂ ಕೊಂಡಾಡಿದರಂತೆ.

  ಒಟ್ಟಿನಲ್ಲಿ ಕೊಂಚ ಕಾಲ ಸೆಟ್‌ನಲ್ಲಿದ್ದ ಎಲ್ಲರನ್ನೂ ವಿದ್ಯಾ ತಬ್ಬಿಬ್ಬುಗೊಳಿಸಿದ್ದರು. ಅಂದಹಾಗೆ ಈ ಚಿತ್ರದಲ್ಲಿ ಈಕೆ ಗರ್ಭಿಣಿ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಂಡನ್‍ನಿಂದ ಈಕೆಯ ಪತಿ ಉದ್ಯೋಗ ಹುಡುಕಿಕೊಂಡು ಭಾರತಕ್ಕೆ ಬರುತ್ತಾನೆ. ಪತಿಯನ್ನು ಹುಡುಕಿಕೊಂಡು ಈಕೆ ಕೋಲ್ಕತ್ತಾಗೆ ಹೋಗುತ್ತಾಳೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥೆ! (ಏಜೆನ್ಸೀಸ್)

  English summary
  Actress Vidya Balan has shocked director Sujoy Ghosh photo shoot for Kahaani. She appeared before him totally drunken and shaky. The director was shocked to see Vidya is such a condition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X