»   » ದಾಂಪತ್ಯಕ್ಕೆ ಅಡಿಯಿಟ್ಟ ಶಂಕರನಾಗ್ ಮಗಳು ಕಾವ್ಯ

ದಾಂಪತ್ಯಕ್ಕೆ ಅಡಿಯಿಟ್ಟ ಶಂಕರನಾಗ್ ಮಗಳು ಕಾವ್ಯ

Posted By:
Subscribe to Filmibeat Kannada

ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಮತ್ತು ದಿವಂಗತ ನಟ ಶಂಕರನಾಗ್ ಅವರ ಮಗಳು ಕಾವ್ಯ ನಾಗ್ ಭಾನುವಾರ(ಜ.25) ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬಾಲ್ಯದ ಗೆಳೆಯ ಸಲೀಲ್ ಅವರನ್ನು ಕಾವ್ಯ ಬೆಂಗಳೂರು ಹೊಸೂರು ರಸ್ತೆಗೆ ಸಮೀಪದ ಮಣಿಪಾಲ್ ಕಂಟ್ರಿ ರೆಸಾರ್ಟ್ ನಲ್ಲಿ ಮದುವೆಯಾದರು.

ಸಲೀಲ್ ವೃತ್ತಿಯಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರೆ ಕಾವ್ಯ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಕಾವ್ಯ ಮತ್ತು ಸಲೀಲ್ ನೂತನ ದಂಪತಿಗಳು ಶೀಘ್ರದಲ್ಲೇ ಇಂಗ್ಲೆಂಡ್ ಗೆ ಹಾರಲಿದ್ದಾರೆ.

ಕಾವ್ಯ ಅವರ ದೊಡ್ಡಪ್ಪ ಅನಂತನಾಗ್, ಕನ್ನಡ ಚಿತ್ರರಂಗದ ನಟರಾದ ರಮೇಶ್ ಅರವಿಂದ್, ಪ್ರಣಯರಾಜ ಶ್ರೀನಾಥ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್, ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್, ನಟಿ ಸುಮಲತಾ ಅಂಬರೀಷ್ ಸೇರಿದಂತೆ ಹಲವು ಚಿತ್ರನಟರು ಮತ್ತು ರಂಗಭೂಮಿ ಕಲಾವಿದರು ಆಗಮಿಸಿದ್ದರು.

ಮದುವೆ ಸಮಾರಂಭಕ್ಕೆ ಆರ್ ಕೆ ನಾರಾಯಣ್ ಅವರ ಜನಪ್ರಿಯ ಕಾದಂಬರಿ 'ಮಾಲ್ಗುಡಿ ಡೇಸ್'ಪಾತ್ರಧಾರಿಗಳು ಆಗಮಿಸಿದ್ದದ್ದು ವಿಶೇಷವಾಗಿತ್ತು. ಕಾವ್ಯ ಮತ್ತು ಸಲೀಲ್ ಅವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada