For Quick Alerts
  ALLOW NOTIFICATIONS  
  For Daily Alerts

  ಪುಣ್ಯವಂತನಿಗೆ ಇನ್ನೂ ಶುಭಮುಹೂರ್ತ ಕೂಡಿಬಂದಿಲ್ಲ

  By Rajendra
  |

  ನಾಗೇಂದ್ರಪ್ರಸಾದ್ ಗೀತರಚನೆಕಾರ ಕಮ್ ನಿರ್ದೇಶಕ. ನಿರ್ದೇಶನದಲ್ಲಿ ಇದುವರೆಗೂ ಅಂತ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲವಾದರೂ, ಗೀತರಚನೆಕಾರರಾಗಿ ಅವರು ಇವತ್ತಿಗೂ ಬ್ಯುಸಿ. ಅವರ ನಿರ್ದೇಶನದ ಕೊನೆಯ ಚಿತ್ರ 'ವಿನಾಯಕ ಗೆಳೆಯರ ಬಳಗ'. ಅದಾದ ಮೇಲೆ ಅವರ ಸದ್ದಿರಲಿಲ್ಲ. ಈಗೊಂದು ಹೊಸ ಚಿತ್ರ ಅನೌನ್ಸ್ ಮಾಡುವ ಮೂಲಕ ನಾಗೇಂದ್ರ ಪ್ರಸಾದ್ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಹೆಸರು 'ಪುಣ್ಯವಂತ'.

  ಶಿವರಾಜ್‌ಕುಮಾರ್ ಈಗಾಗಲೇ ಒಪ್ಪಿಕೊಂಡು ಚಿತ್ರೀಕರಣದಲ್ಲಿರುವ ಸಿನಿಮಾಗಳ ಸಂಖ್ಯೆಯೇ ಬೆಚ್ಚಿಬೀಳಿಸುವಂತಿದೆ. ಅದರ ನಡುವೆಯೇ ತೂರಿ ಬಂದಿರುವ ಹೆಸರು ಪುಣ್ಯವಂತ. ನಾಗೇಂದ್ರ ಪ್ರಸಾದ್ ಒಪ್ಪಿಸಿರುವ ಸ್ಕ್ರಿಪ್ಟ್ ಶಿವಣ್ಣ ಒಪ್ಪಿದ್ದಾರಂತೆ. ಆದರೆ ಪುಣ್ಯದ ಕೆಲಸದ ಆರಂಭ ಯಾವಾಗ ಅನ್ನೋದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

  ಶಿವಣ್ಣ ತನ್ನ ಕಮಿಟೆಡ್ ಸಿನಿಮಾಗಳನ್ನೆಲ್ಲ ಮುಗಿಸಿದ ಆಮೇಲಷ್ಟೇ ಪುಣ್ಯವಂತ ಸಿನಿಮಾವಾದ್ದರಿಂದ, ಸದ್ಯಕ್ಕೆ ನಾಗೇಂದ್ರ ಪ್ರಸಾದ್ ಕೂಡಾ ಈ ವಿಷಯದಲ್ಲಿ ಹೆಚ್ಚು ಗುಟ್ಟೊಡೆಯುವುದಿಲ್ಲ. ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಅನ್ನೋದು ಅವರ ಸದ್ಯದ ಪ್ರತಿಕ್ರಿಯೆ. ನಟರಾಜ್ ಮತ್ತು ಮುನಿರಾಜ್ ಎಂಬುವವರು ಪುಣ್ಯವಂತನಿಗೆ ಕಾಸು ಸುರಿಯುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Hat Trick Hero Shivrajkumar's Punyavantha launch date not fixed, may be the movie delayed. V Nagendra Prasad, who has earlier done the movies like Ambi, Meghave Maghave and Muniya, will direct the movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X