For Quick Alerts
  ALLOW NOTIFICATIONS  
  For Daily Alerts

  ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದ ಸಿಮ್ರಾನ್

  By Rajendra
  |

  ಸರಿಸುಮಾರು ಹದಿನಾಲ್ಕು ವರುಷಗಳ ಬಳಿಕ ಮೋಹಕ ತಾರೆ ಸಿಮ್ರಾನ್ ಕನ್ನಡಕ್ಕೆ ಮರಳಿದ್ದಾರೆ. ಆಕೆ ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಸಿಂಹದ ಮರಿ' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ರಿಯಲ್ ಸ್ಟಾರ್ ಉಪೇಂದ್ರ ಅವರ ತ್ರಿಪಾತ್ರಾಭಿನಯದ 'ಗಾಡ್‌ ಫಾದರ್' ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.

  ತೆಲುಗು,ತಮಿಳಿನಲ್ಲಿ ಸಿಮ್ರಾನ್ ಅಭಿನಯ ಚಿತ್ರಗಳು ತೊಂಬತ್ತರ ದಶಕದಲ್ಲಿ ಬಾಕ್ಸಾಫೀಸ್ ಚಿಂದಿ ಮಾಡಿದ್ದವು. 2000ನೇ ವರುಷದಲ್ಲೂ ತುಂಬಾ ಬೇಡಿಕೆಯಲ್ಲಿದ್ದ ಈಕೆ 2003ರಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಬಳಿಕ ಬೆಳ್ಳಿತೆರೆಯಿಂದ ಹಿಂದೆ ಸರಿದಿದ್ದರು. ಈಗ ಎರಡು ಮಕ್ಕಳ ತಾಯಿಯಾಗಿರುವ ಈಕೆ ಪುನಃ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ.

  'ಗಾಡ್ ಫಾದರ್' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಶ್ರಿಯಾ ಕೂಡ ಅಭಿನಯಿಸಲಿದ್ದಾರೆ. ಇದು ತಮಿಳಿನ 'ವರಲಾರು' ಚಿತ್ರದ ರೀಮೇಕ್. ಮೂಲ ಚಿತ್ರಕ್ಕೆ ಕೆ ಎಸ್ ರವಿಕುಮಾರ್ ಆಕ್ಷನ್, ಕಟ್ ಹೇಳಿದ್ದರು. ಅಜಿತ್ ನಟಿಸಿದ್ದ ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ ಆಗಿತ್ತು. ಕನ್ನಡಲ್ಲಿ ಕೆ ಮಂಜು ನಿರ್ಮಿಸುತ್ತಿರುವ ಈ ಚಿತ್ರವನ್ನು ಪಿ ಸಿ ಶ್ರೀರಾಂ ನಿರ್ದೇಶಿಸಲಿದ್ದಾರೆ. ಏಪ್ರಿಲ್ 25ರಿಂದ ಚಿತ್ರೀಕರಣ ಶುರುವಾಗಿದೆ.

  English summary
  After a fourteen years long gap actress Simran returns to Real Star Upendra lead Kannada film 'God Father' which is to be launched on April 25. Earlier Simran had acted as a heroine with Shivarajkumar in the Kannada film Simhada Mari directed by Om Prakash Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X