»   » ಕಿಂಗ್ ಖಾನ್ ಶಾರುಖ್ ಜತೆ ಕಿಚ್ಚ ಸುದೀಪ್!

ಕಿಂಗ್ ಖಾನ್ ಶಾರುಖ್ ಜತೆ ಕಿಚ್ಚ ಸುದೀಪ್!

Subscribe to Filmibeat Kannada

ಕಿಚ್ಚ ಸುದೀಪ್ ಬಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಸದ್ಯಕ್ಕೆ ಅವರ ಕೈಯಲ್ಲೀಗ ನಾಲ್ಕು ಹಿಂದಿ ಚಿತ್ರಗಳಿವೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಸುದೀಪ್ ಮತ್ತೊಂದು ಸಿಹಿ ಘಟನೆಯನ್ನು ಸವಿಯುವಂತಾಗಿದೆ. ಸುದೀಪ್ ರನ್ನು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಖುದ್ದಾಗಿ ಆಹ್ವಾನಿಸಿ ಮಾತನಾಡಿದ್ದಾರೆ. ಈ ರಸಮಯ ಕ್ಷಣಗಳನ್ನು ಸುದೀಪ್ ಆಂಗ್ಲ ದೈನಿಕ ಒಂದರಲ್ಲಿ ಹಂಚಿಕೊಂಡಿದ್ದಾರೆ. ಆ ರೋಚಕ ಕ್ಷಣಗಳನ್ನು ಅವರ ಮಾತುಗಳಲ್ಲೇ ಕೇಳಿ...

'ಫೂಂಕ್ 2'ರ ಚಿತ್ರೀಕರಣದಲ್ಲಿದ್ದ ನನ್ನನ್ನು ಗೆಳೆಯ ಹಾಗೂ ನಟ ನಿಖಿಲ್ ದ್ವಿವೇದಿ ನನ್ನನ್ನು ಪುಸಲಾಯಿಸಿ ಇಲ್ಲೇ ಹೋಗಿ ಬರೋಣ ಬಾ ಎಂದು ಕರೆದ. ಸರಿ ಕಾರು ಮುಂಬೈನ ಬೀದಿಗಳಲ್ಲಿ ಹೊರಟು ಶಾರುಖ್ ಬಂಗಲೆ ಮುನ್ನತ್ ತಿರುಗಿಸಿದಾಗಲೂ ನನಗೆ ಅರ್ಥವಾಗಲಿಲ್ಲ. ಶಾರುಖ್ ಬಂಗಲೆಗೆ ಕರೆದೊಯ್ದಾಗಲೇ ಗೊತ್ತಾಗಿದ್ದು, ನಾವು ಎಲ್ಲಿದ್ದೇವೆ ಎಂದು. ಶಾರುಖ್ ತೋಳಿಗೆ ಫಿಜಿಯೋ ಥೆರಪಿ ಮಾಡಿಸಿಕೊಳ್ಳುತ್ತಿದ್ದರು. ಸ್ವಲ್ಪ ಸಮಯ ಕಾದ ಬಳಿಕ ಶಾರುಖ್ ನಮ್ಮ ಜತೆ ಮಾತನಾಡಲು ಬಂದರು.

'ರಣ್' ಚಿತ್ರದ ಪ್ರೊಮೋಗಳನ್ನು ನೋಡಿರುವ ಶಾರುಖ್ ಬಹಳಷ್ಟು ಪ್ರಭಾವಿತನಾಗಿದ್ದಾಗಿ ತಿಳಿಸಿದ್ದಾರೆ. ಆರಂಭದಲ್ಲಿ ಶಾರುಖ್ ರನ್ನು ಮಾತನಾಡಬೇಕಾದರೆ ಒಂಚೂರು ನರ್ವಸ್ ಆದೆ. ನಂತರ ಮಾತು ಚಿತ್ರಗಳ ಕಡೆಗೆ ಹೊರಳಿತು. ಅವರೊಂದಿಗೆ ಮಾತನಾಡುತ್ತ್ತಿದ್ದರೆ ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ.ಶಾರುಖ್ ಒಬ್ಬ ಸರಳ ಜೀವಿ. ಅವರ ಎಲ್ಲಾ ಚಿತ್ರಗಳನ್ನೂ ನೋಡಿದ್ದೇನೆ. ಚಕ್ ದೇ ಇಂಡಿಯಾ ನನಗಿಷ್ಟವಾದ ಚಿತ್ರ ಎಂದು ಶಾರುಖ್ ಗೆ ತಿಳಿಸಿದೆ .

ಶಾರುಖ್ ಮೊದಲ ಆದ್ಯತೆ ಸಂಸಾರ ಆನಂತರವಷ್ಟೇ ಸಿನಿಮಾ. ಅವರೊಂದಿಗೆ ಕಳೆದ ಕ್ಷಣಗಳು ನಿಜಕ್ಕೂ ರೋಮಾಂಚನ. ಶಾರುಖ್ ಜತೆ ಊಟ ಮಾಡುವುದಕ್ಕೂ ಮುನ್ನ ಅವರ ಪತ್ನಿ ಗೌರಿ ಆತ್ಮೀಯವಾಗಿ ಮಾತನಾಡಿಸಿದರು. ಶಾರುಖ್ ರೊಂದಿಗಿನ ಸ್ನೇಹಪರ ಭೇಟಿ ಮರೆಯಲು ಸಾಧ್ಯವೇ ಇಲ್ಲ. ನನಗೆ ನಿಜಕ್ಕೂ ಹೆಮ್ಮೆ ಎನ್ನಿಸುತ್ತಿದೆ ಎಂದು ಸುದೀಪ್ ಖುಷಿಯಿಂದ ಹೇಳಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada