»   » ಸುದೀಪ್ ಜತೆ ನಾರಾಯಣ್ ಚಿತ್ರ 'ವೀರ ಪರಂಪರೆ'

ಸುದೀಪ್ ಜತೆ ನಾರಾಯಣ್ ಚಿತ್ರ 'ವೀರ ಪರಂಪರೆ'

Posted By:
Subscribe to Filmibeat Kannada

ಎಸ್ ನಾರಾಯಣ್ ನಿರ್ದೇಶಿಸಿ, ನಿರ್ಮಿಸುತ್ತಿರುವ ಸುದೀಪ್ ಚಿತ್ರಕ್ಕೆ 'ವೀರ ಪರಂಪರೆ' ಎಂದು ಹೆಸರಿಡಲಾಗಿದೆ. 'ವೀರ ಪರಂಪರೆ' ಚಿತ್ರ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ. ಇದು ತಮಿಳಿನ 'ಸಾಮಿ' ಚಿತ್ರದ ರೀಮೇಕ್ ಅಲ್ಲ ಎಂದು ಎಸ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಇದೊಂದು ಅಪ್ಪಟ ಸ್ವಮೇಕ್ ಚಿತ್ರವಾಗಿದ್ದು ನಾರಾಯಣ್ ಬಹಳ ಹಿಂದೆಯೆ ಕತೆಯನ್ನು ಸಿದ್ಧಪಡಿಸಿದ್ದರಂತೆ. ಸುದೀಪ್ ಜೊತೆ ಕೋಮಲ್, ಶರಣ್, ಶ್ರೀನಿವಾಸಮೂರ್ತಿ ಮೊದಲಾದವರಿದ್ದಾರೆ. ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಕನ್ನಡದ ಹೊಸ ಮುಖಕ್ಕಾಗಿ ಹುಡುಕಾಟ ನಡೆದಿದೆ.

'ವೀರ ಪರಂಪರೆ' ಚಿತ್ರದ ನಾಯಕಿಗಾಗಿ ಈ ಹಿಂದೆ ಅರ್ಜಿ ಕರೆಯಲಾಗಿತ್ತು. ಅವಕಾಶ ಕೋರಿ ಬಂದಿರುವ ಪತ್ರಗಳಲ್ಲಿ ಸೂಕ್ತ ನಾಯಕಿಗಾಗಿ ಹುಡುಕಾಟ ಮುಂದುವರಿದಿದೆ. ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಎಸ್ ನಾರಾಯಣ್ ಅವರೇ ವಹಿಸಿಕೊಂಡಿದ್ದಾರೆ. 'ಚೆಲುವಿನ ಚಿಲಿಪಿಲಿ' ಚಿತ್ರಕ್ಕೆ ಕೆಲಸ ಮಾಡಿದ್ದ ಜಗದೀಶ್ ವಾಲಿ ಛಾಯಾಗ್ರಹಣ ಚಿತ್ರಕ್ಕಿರುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada