»   »  ಸುದೀಪ್ ವೀರ ಮದಕರಿ ಚಿತ್ರಕ್ಕೆ ಮರು ನಾಮಕರಣ

ಸುದೀಪ್ ವೀರ ಮದಕರಿ ಚಿತ್ರಕ್ಕೆ ಮರು ನಾಮಕರಣ

Subscribe to Filmibeat Kannada
Veera Madhakari title changed
ಚಿತ್ರದುರ್ಗದ ಕೋಟೆಯ ಪ್ರತಿಯೊಂದು ಕಲ್ಲುಗಳು ಮದಕರಿಯ ಸಾಹಸವನ್ನು ಸಾರುತ್ತದೆ. ಅಂಥ ಧೀರಪುರುಷನ ಹೆಸರಿನಿಂದ ಚಿತ್ರವೊಂದು ಆರಂಭವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಆ ಮದಕರಿ ತನ್ನ ಶತ್ರುಗಳನ್ನು ಮಟ್ಟ ಹಾಕಿದ ಹಾಗೆ ಈ 'ವೀರ ಮದಕರಿ' ಸಮಾಜದ ದುಷ್ಟಶಕ್ತಿಗಳ ವಿರುದ್ದ ಮೆಟ್ಟಿ ನಿಲ್ಲುತ್ತಾನೆ.

'ವೀರ ಮದಕರಿ' ಎಂದು ಪ್ರಾರಂಭವಾದ ಚಿತ್ರಕ್ಕೆ ಈಗ ನಿರ್ಮಾಪಕರು 'ಈ ಶತಮಾನದ ವೀರಮದಕರಿ' ಎಂದು ಮರು ನಾಮಕರಣ ಮಾಡಿದ್ದಾರೆ. ಕರ್ನಾಟಕದ ಹೆಮ್ಮೆಯ ನೆಲಗಳಲ್ಲಿ ಚಿತ್ರೀಕರಣ ಮುಗಿಸಿದ ಮದಕರಿ ಕರಿಸುಬ್ಬು ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಹಾಗೂ ಡಿ.ಟಿ.ಎಸ್ ಮುಗಿಸಿ ವಿಶೇಷ ತಂತ್ರಜ್ಞಾನ ಅಳವಡಿಕೆಗಾಗಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾನೆ. ಸದ್ಯದಲ್ಲೇ ನೆಚ್ಚಿನ ಚಿತ್ರಮಂದಿರಗಳಲ್ಲಿ ದರ್ಶನ ನೀಡಲಿದ್ದಾನೆ.

ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್‌ಗಾಂಧಿ ಈ ಚಿತ್ರವನ್ನು ನಿರ್ಮಿಸುತ್ತಿರುವುದ್ದಲ್ಲದೆ ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕ ಸುದೀಪ್ ಈ ಚಿತ್ರದ ನಿರ್ದೇಶಕರೂ ಹೌದು. ದಕ್ಷಿಣಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲೊಬ್ಬರಾದ ಕೀರವಾಣಿ ಈ ಚಿತಕ್ಕೆ ರಾಗ ಸಂಯೋಜಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ
ಚೋರ ಗುರು ಮದಕರಿಗೆ ಸಿಕ್ತು ಗೋದಾಮು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada