»   » ಮಂದಾಕಿನಿ ಚಲನಚಿತ್ರಕ್ಕಾಗಿ ಬಣ್ಣ ಹಚ್ಚಿದ ನಿಜ ವೈದ್ಯರು!

ಮಂದಾಕಿನಿ ಚಲನಚಿತ್ರಕ್ಕಾಗಿ ಬಣ್ಣ ಹಚ್ಚಿದ ನಿಜ ವೈದ್ಯರು!

Posted By: Staff
Subscribe to Filmibeat Kannada


ಬಣ್ಣದ ಲೋಕದಲ್ಲಿ ನಟರು ಡಾಕ್ಟರ್(ಡಾಕ್ಟರೇಟ್ ಗೌರವ ಅಥವಾ ಡಾಕ್ಟರ್ ಪಾತ್ರ ನಿರ್ವಹಣೆ)ಗಳಾಗುವುದು ಸಹಜ! ಆದರೆ ಡಾಕ್ಟರ್ ಗಳೀಗ ಆಕ್ಟರ್ ಗಳಾಗುತ್ತಿದ್ದಾರೆ. ಇದು ಸ್ಯಾಂಡಲ್ ವುಡ್ ನಲ್ಲಿ ಹೊಸ ಬದಲಾವಣೆ. ಖ್ಯಾತ ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್, ಆಯುರ್ವೇದ ತಜ್ಞೆ ಡಾ.ವಸುಂಧರಾ ಭೂಪತಿ ಮತ್ತು ಡಾ.ಟಿ.ರಮೇಶ್, 'ಮಂದಾಕಿನಿ'ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾಯಕಿಗೆ ಸಲಹೆ ನೀಡುವ ಪಾತ್ರವನ್ನು ಚಿತ್ರದಲ್ಲಿ ನಿಜ ವೈದ್ಯರು ಮಾಡಲಿದ್ದಾರೆ. ಇಷ್ಟು ಮಾತ್ರವಲ್ಲ, 1978ರಲ್ಲಿ ಮಿಸ್ ಬೆಂಗಳೂರು ಆಗಿದ್ದ ಸುಮಾ ರಾವ್ ಈ ಚಿತ್ರದಲ್ಲಿ ನಾಯಕಿಯ ಅತ್ತೆಯಾಗಿ ಅಭಿನಯಿಸುತ್ತಿದ್ದಾರೆ. ಭಾರತೀಯ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಚಿತ್ರ ಗಮನ ಸೆಳೆಯಲಿದೆ ಎಂಬುದು ಚಿತ್ರದ ನಿರ್ದೇಶಕ ರಮೇಶ್ ಸುರ್ವೇ ಅವರ ವಿಶ್ವಾಸ. 

ಬಿ.ಕೆ.ಶ್ರೀನಿವಾಸ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ, ಬೆಂಗಳೂರಿನ ಚಂದ್ರ ಲೇ ಔಟ್ ನಲ್ಲಿ ಇತ್ತೀಚೆಗೆ ನಡೆಯಿತು. ದುನಿಯಾ ನಾಯಕಿ ರಶ್ಮೀ, ಜಯಂತಿ, ಪವಿತ್ರಾ ಲೋಕೇಶ್, ಶರತ್ ಲೋಹಿತಾಶ್ವ  ತಾರಾಗಣದಲ್ಲಿದ್ದು, ಕಲ್ಯಾಣ್ ಸಂಗೀತ ನೀಡಿದ್ದಾರೆ. ಪಿ.ಕೆ.ಹೆಚ್.ದಾಸ್ ಕ್ಯಾಮೆರಾ ಕೆಲಸವನ್ನು ಮಾಡುತ್ತಿದ್ದಾರೆ. 

 

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada