»   »  ರಕ್ಷಿತಾರ ಪರಮಾಪ್ತ ಗೆಳತಿ ಯಾರೂಂತ ಗೊತ್ತಾ?

ರಕ್ಷಿತಾರ ಪರಮಾಪ್ತ ಗೆಳತಿ ಯಾರೂಂತ ಗೊತ್ತಾ?

Posted By:
Subscribe to Filmibeat Kannada
Rakshita
ತಮ್ಮ ಹಳೆಯ ದ್ವೇಷವನ್ನು ಮರೆತು ನಟಿ ರಮ್ಯಾ ಮತ್ತು ರಕ್ಷಿತಾ ಮತ್ತೆ ಒಂದಾಗಿದ್ದಾರೆ! ಅವರಿಬ್ಬರೂ ಒಟ್ಟಿಗೇ ಅಮೃತ ಮಹೋತ್ಸವದ ರಂಗತಾಲೀಮಿಗೆ ಆಗಮಿಸುತ್ತಿದ್ದಾರೆ. ಅಮೃತ ಮಹೋತ್ಸವದ ರಿಹರ್ಸಲ್ ಗೆ ತಡವಾಗಿ ಬಂದರೆ ಹಳ್ಳಿಮೇಷ್ಟ್ರು ರವಿಚಂದ್ರನ್ ರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಮನೆಯಲ್ಲಿ ಪುಟ್ಟ ಮಗು ಇರುವ ಕಾರಣ ರಕ್ಷಿತಾರಿಗೆ ಹಳ್ಳಿಮೇಸ್ಟ್ರು ಕೊಂಚ ವಿನಾಯಿತಿ ಕೊಟ್ಟಿದ್ದಾರೆ!

''ಅಮೃತ ಮಹೋತ್ಸವದ ನೆಪದಲ್ಲಿ ರಮ್ಯಾ ಮತ್ತು ನಾನಷ್ಟೇ ಅಲ್ಲ ಇಡೀ ಕನ್ನಡ ಚಿತ್ರದ್ಯಮವೇ ಒಂದಾಗಿದೆ. ಹಿರಿಯ ಕಿರಿಯ ಕಲಾವಿದರೆಲ್ಲಾ ಒಂದೇ ವೇದಿಕೆಯಲ್ಲಿ ಸಮಾಗಮವಾಗುತ್ತಿರುವುದು ನಿಜಕ್ಕೂ ನನಗೆ ಖುಷಿ ಕೊಟ್ಟಿದೆ ಎಂದು ರಕ್ಷಿತಾ ಮೇಡಂ ಹರ್ಷ ವ್ಯಕ್ತಪಡಿಸಿದರು. ಕಳೆದ ಎರಡು ದಿನಗಳಿಂದ ನಾನು ರಿಹರ್ಸಲ್ ಗೆ ಬರುತ್ತಿದ್ದೇನೆ.ಮುಂಚೆಯಿಂದಲೂ ನನಗೆ ನೃತ್ಯದಲ್ಲಿ ಒಂಚೂರು ಟಚ್ ಇರುವ ಕಾರಣ ತಡವಾಗಿ ರಿಹರ್ಸಲ್ ಗೆ ಬರುತ್ತಿದ್ದರೂ ನನಗೇನು ಸಮಸ್ಯೆ ಎದಿರಾಗುತ್ತಿಲ್ಲ ಎಂದರು.

ಅಮೃತ ಮಹೋತ್ಸವಕ್ಕೆ ರವಿಚಂದ್ರನ್ ರೊಂದಿಗೆ ನನ್ನದೊಂದು ಪುಟ್ಟ ಕಾರ್ಯಕ್ರಮವಿದೆ. ಮನೆಯಲ್ಲಿ ಪುಟ್ಟ ಮಗು ಇರುವ ಕಾರಣ ರಿಹರ್ಸ್ ಗಾಗಿ ಹೆಚ್ಚು ಸಮಯ ಮೀಸಲಾಗುತ್ತಿಲ್ಲ ಎಂದರು. ರಮ್ಯಾ ನಡುವಿನ ಮುನಿಸಿಗೆ ಕಾರಣ ಏನು? ಎಂಬ ಪ್ರಶ್ನೆಗೆ, ''ಹಾಗೇನು ಇಲ್ಲ, ನಾವಿಬ್ಬರೂ ವಿಭಿನ್ನ ಮನೋಭಾವದವರು. ಹಾಗಾಗಿ ನಾವು ಶತ್ರುಗಳಂತೆ ಕಂಡಿರಬಹುದು. ನಿಜ ಹೇಳಬೇಕೆಂದರೆ ನಾವಿಬ್ಬರೂ ಪರಮಾಪ್ತ ಸೇಹಿತರು ಎಂಬ ಘೋರ ಸತ್ಯವನ್ನು ರಕ್ಷಿತಾಬಹಿರಂಗಪಡಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!
ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada