»   »  ಬೆಂಗಳೂರು, ಮೈಸೂರಿನಲ್ಲಿ ಐತಲಕ್ಕಡಿ

ಬೆಂಗಳೂರು, ಮೈಸೂರಿನಲ್ಲಿ ಐತಲಕ್ಕಡಿ

Posted By:
Subscribe to Filmibeat Kannada

ಕಳೆದ ತಿಂಗಳಲ್ಲಿ ಮೊದಲ ಹಂತದ ಚಿತ್ರೀಕರಣ ಪೂರೈಸಿದ 'ಐತಲಕ್ಕಡಿ' ಚಿತ್ರಕ್ಕೆ ಈಗ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈ ಹಂತದ ಚಿತ್ರೀಕರಣ ನೆರವೇರಲಿದ್ದು, ಜನಪ್ರಿಯ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ನಿರ್ದೇಶಕ ಜೆ.ಜಿ.ಕೃಷ್ಣ ತಿಳಿಸಿದ್ದಾರೆ.

ಚಿತ್ರಕುಟೀರ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲೇ ವಿಶಿಷ್ಟ ಪ್ರಯೋಗ. ಕನ್ನಡ ಚಿತ್ರರಂಗದ ಜನಪ್ರಿಯ ನಟರನ್ನು ಒಂದೇ ಚಿತ್ರದಲ್ಲಿ ನೋಡುವ ಸೌಭಾಗ್ಯ ನೋಡುಗರದಾಗಲಿದೆ. ಚಿತ್ರದಲ್ಲಿ ಅಭಿನಯಿಸುವ ಕಲಾವಿದರ ಸಂಖ್ಯೆ ನೂರರ ಗಡಿ ದಾಟುವ ಸಾಧ್ಯತೆ ಇದೆ. ಒಟ್ಟಿನಲ್ಲಿ ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರ ಸಹಭಾಗಿತ್ವದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಚಿತ್ರರಸಿಕರಿಗೆ ರಸದೌತಣ ನೀಡಲಿದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಜೆ.ಜಿ.ಕೃಷ್ಣ ಅವರು ಚಿತ್ರಕ್ಕೆ ಛಾಯಾಗ್ರಹಣ ನೀಡುವುದರೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಾಧುಕೋಕಿಲಾರ ಸಂಗೀತ ಸಂಯೋಜನೆ, ತುಷಾರ ರಂಗನಾಥ್ ಸಂಭಾಷಣೆ, ಆರ್.ಡಿ.ರವಿ ಸಂಕಲನವಿದೆ.

'ಐತಲಕ್ಕಡಿ ಚಿತ್ರದ ತಾರಾಬಳಗದಲ್ಲಿ ಜಗ್ಗೇಶ್, ವಿಜಯರಾಘವೇಂದ್ರ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ನೀತು, ಶೋಭ್‌ರಾಜ್, ಜೈಜಗದೀಶ್, ಕೋಮಲ್, ಶರಣ್, ಗಿರಿಜಾ ಲೋಕೇಶ್, ಪದ್ಮಜಾರಾವ್, ಕರಿಬಸವಯ್ಯ, ಮೋಹನ್ ಜುನೇಜಾ, ಬ್ಯಾಂಕ್ ಜನಾರ್ದನ್, ಎಂ.ಎಸ್.ಉಮೇಶ್, ಶಂಕರ್‌ರಾವ್, ದೊಡ್ಡಣ್ಣ, ಹರೀಶ್‌ರಾಯ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X