For Quick Alerts
  ALLOW NOTIFICATIONS  
  For Daily Alerts

  ಸುಮಾ ಸಂದರ್ಶನವೇ ಬಯೋಡೇಟಾ ಆದಾಗ

  By Staff
  |

  ಹೆಸರು: ಸುಮಾ ಗುಹಾ

  ವಿದ್ಯೆ: ಬಿ.ಎಸ್‌ಸಿ

  ಹುಟ್ಟೂರು: ಕೋಲ್ಕತ್ತಾ

  ಮೂಲ ಭಾಷೆ: ಬೆಂಗಾಲಿ

  ನೆಲೆ:
  ಮುಂಬೈ

  ಅಲ್ಲೇ ಯಾಕೆ ನೆಲೆ?: ರ‌್ಯಾಂಪ್ ಏರದೆ ನಟಿಯಾಗುವುದುಂಟೆ!

  ಅಭಿನಯದ ಗಂಧ: ಮೊದಲು ಹಿಂದಿ ನಾಟಕಗಳಲ್ಲಿ. ಆಮೇಲೆ ತಮಿಳಿನ 'ದೊರೈ' ಚಿತ್ರದಲ್ಲಿ; ಅರ್ಜುನ್ ಸರ್ಜಾ ಎದುರು. ಈಗ ಕನ್ನಡದಲ್ಲಿ ರಮೇಶ್‌ಗೆ ಜೋಡಿ.

  ಕನ್ನಡ ಸಿನಿಮಾ ಹೆಸರು:
  ಪ್ರೀತಿಯಿಂದ ರಮೇಶ್.

  ಕನ್ನಡ ಯಾಕೆ ಬೇಕಮ್ಮ?:
  ದಕ್ಷಿಣ ಭಾರತದ ಸಿನಿಮಾಗಳಲ್ಲಿ ಶಿಸ್ತು ಉಂಟು. ಅದು ನನಗೆ ತುಂಬಾ ಇಷ್ಟ.

  ಏನಾದರೂ ಸ್ಪೆಷಲ್ ಟ್ಯಾಲೆಂಟ್?: ಕಥಕ್‌ನಲ್ಲಿ ವಿಶಾರದ ಪಾಸ್ ಆಗಿದೆ. ಭರತನಾಟ್ಯ ಗೊತ್ತು. ನಾನು ಚೆನ್ನಾಗಿರೋದು ಇನ್ನೊಂದು ಸ್ಪೆಷಲ್ ಟ್ಯಾಲೆಂಟ್.

  ಪಾತ್ರದ ಆಯ್ಕೆಯ ಮಾನದಂಡ: ಏಕತಾನತೆ ಇಷ್ಟವಿಲ್ಲ. ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಪಾತ್ರ ಬದಲಾಗಬೇಕು ಅನ್ನೋದು ಕಂಡೀಷನ್.

  ನಟಿಯಾಗದಿದ್ದರೆ?: ಡಾಕ್ಟ್ರೋ, ಸೈಂಟಿಸ್ಟೋ ಆಗಿರ್‍ತಿದ್ದೆ. ನಮ್ಮಪ್ಪ ಡಾಕ್ಟರ್. ಅಮ್ಮ ಪ್ರೊಫೆಸರ್.

  ರಮೇಶ್ ಹೇಗೆ?: ಒಳ್ಳೆ ನಟ. ಕೋ-ಆಪರೇಟಿವ್. ತುಂಬಾ ಹೇಳಿಕೊಟ್ಟರು.

  ಬೆಂಗಳೂರಂದ್ರೆ: ಥಂಡಾ ಥಂಡಾ ಕೂಲ್ ಕೂಲ್.

  ಮದುವೆ: ಅಯ್ಯಯ್ಯಪ್ಪಾ... ಈಗ್ಲೇ ಬೇಡ :)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X