»   »  ಬಾಲಾಜಿ ಯಲ್ಲಿ ‘ಹೃದಯದಲಿ ಇದೇನಿದು’

ಬಾಲಾಜಿ ಯಲ್ಲಿ ‘ಹೃದಯದಲಿ ಇದೇನಿದು’

Subscribe to Filmibeat Kannada

ಹುಲಿಯೂರು ದುರ್ಗಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಹೃದಯದಲ್ಲಿ ಇದೇನಿದು" ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿರ್ಮಾಪಕಿ ಕುಮಾರಿ ದರ್ಶನ್‌ಪ್ರಿಯ ತಿಳಿಸಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಕರ್ನಾಟಕದ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಉದ್ಯಾನನಗರಿ ಹಾಗೂ ಕುಮುಟಾದಲ್ಲಿ 40ದಿನಗಳ ಕಾಲ ನಡೆದಿದೆ. ನವಿರಾದ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಆರು ಹಾಡುಗಳಿವೆ. ಧರ್ಮಪ್ರಕಾಶ್ ಅವರ ಸಂಗೀತದಲ್ಲಿ ಈ ಹಾಡುಗಳು ಮೂಡಿಬಂದಿದೆ. ಸದ್ಯದಲ್ಲೆ ಚಿತ್ರದ ಧ್ವನಿಸುರುಳಿ ಲೋಕಾರ್ಪಣೆಯಾಗಲಿದೆ.

ಶಿವನ್ ಚಿತ್ರದ ನಿರ್ದೇಶಕರಾಗಿದ್ದು, ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ತ್ಯಾಗರಾಜನ್ ಕ್ಯಾಮೆರಾ, ದೇವರಾಜ್ ಸಂಕಲನ, ತಪಸಿರಾಜ್ ಸಾಹಸ, ಕವಿರಾಜ್, ನಾಗೇಂದ್ರ ಪ್ರಸಾದ್ ಗೀತರಚನೆ, ಹೊಸ್ಮನೆ ಮೂರ್ತಿ ಕಲೆ ಹಾಗೂ ರಮೇಶ್, ಚಂದ್ರಪ್ಪನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಹುಲ್, ರೂಪಾಲಿ, ವಂದನಾ ಗುಪ್ತಾ, ರಂಗಾಯಣ ರಘು, ಅವಿನಾಶ್, ಕೋಮಲ್, ಚಿತ್ರಾಶೆಣೈ, ಸುಧಾ ಬೆಳವಾಡಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...