ಇನ್ನೋವೇಟಿವ್ ಮಲ್ಟಿಫ್ಲೆಕ್ಸ್ ನಲ್ಲಿ ಅಗ್ನಿ ಆಕಸ್ಮಿಕ

ಕೂಡಲೆ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಯಿತು. ಇನ್ನೋವೇಟಿವ್ ಮಲ್ಟಿಫಿಕ್ಸ್ ನಲ್ಲಿ ನಾಲ್ಕು ಪ್ರದರ್ಶನ ಕೊಠಡಿಗಳಿವೆ. ಒಂದನೇ ಕೊಠಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಸುಮಾರು 150 ಚದರ ಮೀಟರ್ ಗಳಷ್ಟು ಪ್ರದೇಶ ಹಾನಿಗೊಳಗಾಗಿದೆ ಎಂದು ಘಟನೆಯನ್ನು ಅಗ್ನಿಶಾಮಕ ಅಧಿಕಾರಿಗಳು ವಿವರಿಸಿದರು.
ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಆಗಮಿಸದೇ ಇದ್ದದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯಿತು ಎಂಬುದು ಇನ್ನೋವೇಟಿವ್ ಮಲ್ಟಿಫ್ಲೆಕ್ಸ್ ಅಧಿಕಾರಿಗಳ ಆರೋಪ. ಇತರೆ ಪ್ರದರ್ಶನ ಕೊಠಡಿಗಳಿಗೂ ಬೆಂಕಿ ವಿಸ್ತರಿಸಿತ್ತು. ವಿದ್ಯುತ್, ಹವಾನಿಯಂತ್ರಣ ಉಪಕರಣಗಳು ಸೇರಿದಂತೆ ಪ್ರೊಜೆಕ್ಟರ್ ಸಹ ಭಸ್ಮವಾಗಿವೆ. ಕೊಠಡಿಯ ಮೇಲ್ಛಾವಣೆ ಸಂಪೂರ್ಣ ಹಾಳಾಗಿದೆ.
ಬೆಂಕಿ ಅನಾಹುತ ಹೇಗೆ ಸಂಭವಿಸಿತು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಮಲ್ಟಿಫ್ಲೆಕ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಪ ಪೊಲೀಸ್ ಕಮೀಷನರ್ (ಆಗ್ನೇಯ ವಲಯ) ಬಿ ಎನ್ ಎಸ್ ರೆಡ್ಡಿ ಸ್ಥಳಕ್ಕೆ ಆಗಮಿಸಿ ಘಟನಾ ಸ್ಥಳವನ್ನು ಪರಿಶೀಲಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











