For Quick Alerts
ALLOW NOTIFICATIONS  
For Daily Alerts

ಸರಕಾರಿ ಅಧಿಕಾರಿಗಳ 'ಬಣ್ಣ'ದ ಕದ ಮುಚ್ಚಿದ ಹೈಕೋರ್ಟ್

By Prasad
|

ಬೆಂಗಳೂರು, ಏ. 27 : ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಸಿನೆಮಾ ಮತ್ತು ದೂರದರ್ಶನ ಚಾನಲ್ ಗಳಲ್ಲಿ ನಟಿಸುವುದನ್ನು ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ಸರಕಾರಿ ನೌಕರರು ಎರಡು ವೃತ್ತಿಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕೆಂದು ಉಚ್ಚ ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿದೆ.

ಸರಕಾರಿ ಆದೇಶವನ್ನು ಪ್ರಶ್ನಿಸಿ, ಅಧಿಕಾರಿಗಳಿಗೆ ನಟಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ 'ಬಾ ನಲ್ಲೆ ಮಧುಚಂದ್ರಕೆ' ಖ್ಯಾತಿಯ ಐಎಎಸ್ ಅಧಿಕಾರಿ ಕೆ ಶಿವರಾಮು ಅವರು ರಾಜ್ಯ ಉಚ್ಚ ನ್ಯಾಯಾಲಯ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರಿದ್ದ ಪೀಠ 2004ರಲ್ಲಿ ಶಿವರಾಮು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದೆ.

ಕೇಂದ್ರ ವಿದೇಶಾಂಗ ಸಚಿವರಾಗಿರುವ ಎಸ್ಎಂ ಕೃಷ್ಣ ಅವರು ಅಂದು ಮುಖ್ಯಮಂತ್ರಿಯಾಗಿದ್ದಾಗ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಗಳು ಕರ್ತವ್ಯವನ್ನು ಬದಿಗೊತ್ತಿ ಸಿನೆಮಾದಲ್ಲಿ ನಟಿಸಬಾರದು ಎಂದು ಮಾರ್ಚ್ 9, 2004ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಿವರಾಮು ಪ್ರಶ್ನಿಸಿದ್ದರು.

ಹೊಟ್ಟೆ ತುಂಬಿಸುವ ವೃತ್ತಿಯ ಜೊತೆಗೆ ಬಣ್ಣ ಹಚ್ಚುವ ಕಾಯಕಕ್ಕೂ ಅವಕಾಶ ಮಾಡಿಕೊಡಬೇಕು. ನಟಿಸಲು ಚಿಕ್ಕಾಸೂ ಪಡೆಯುವುದಿಲ್ಲ ಎಂಬ ಶಿವರಾಮು ಕೋರಿಕೆಯನ್ನು ಹೈಕೋರ್ಟ್ ಒಪ್ಪಿಕೊಂಡಿಲ್ಲ. ನಟ ಹಣ ಪಡೆಯದಿದ್ದರೂ ಸಿನೆಮಾ ಒಂದು ವ್ಯಾಪಾರವಾದ್ದರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಿನೆಮಾದಲ್ಲಿ ಸರಕಾರಿ ಅಧಿಕಾರಿ ಭಾಗಿಯಾಗುವುದು ಸಲ್ಲದು ಎಂದು ಖಡಾಖಂಡಿತವಾಗಿ ಹೇಳಿದೆ. ಸಾಕಷ್ಟು ಶ್ರಮ ಬೇಡುವ ಸಿನೆಮಾಗಳಲ್ಲಿ ನಟಿಸುವುದನ್ನು ಬಿಟ್ಟರೆ ಸರಕಾರಿ ವೃತ್ತಿಯಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಬಹುದೆಂದು ಸಂದೇಶ ಕರ್ನಾಟಕ ಹೈಕೋರ್ಟ್ ನೀಡಿದೆ.

ಅಧಿಕಾರಿಗಳನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದಾಗ ಮಾಜಿ ಐಪಿಎಸ್ ಆಫೀಸರ್ ಬಿಸಿ ಪಾಟೀಲ್, ನೌಕರಿಗೆ ಸಲಾಂ ಹೊಡೆದು ಬಣ್ಣದ ಲೋಕವನ್ನು ಆಯ್ಕೆ ಮಾಡಿಕೊಂಡಿದ್ದರು. ನಂತರ ರಾಜಕೀಯಕ್ಕೂ ಇಳಿದು ಹಿರೆಕೇರೂರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸೌಧದಲ್ಲಿ ಕುಳಿತಿದ್ದಾರೆ. ಈ ಇಬ್ಬರೂ ನಟರು ಸಿನೆಮಾ ರಂಗದಲ್ಲೂ ಸಾಧಿಸಿದ್ದು ಅಷ್ಟಕ್ಕಷ್ಟೇ ಎಂಬುದು ಇಲ್ಲಿ ಗಮನಿಸತಕ್ಕ ವಿಚಾರ.

English summary
Karnataka high court upheld the notification issued by the then Chief Minister of Karnataka SM Krishna imposing ban on IAS, IPS and KAS officials from acting. K Shivaram, IAS had filed a writ petition challenging the govt order.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more