»   » ಸಿದ್ದಾರ್ಥ್ ಜೊತೆ ಪ್ರಣೀತಾ ಲಿಪ್ ಲಾಕ್ ಚುಂಬನ!

ಸಿದ್ದಾರ್ಥ್ ಜೊತೆ ಪ್ರಣೀತಾ ಲಿಪ್ ಲಾಕ್ ಚುಂಬನ!

Posted By:
Subscribe to Filmibeat Kannada

ಬೆಂಗಳೂರು ಬೆಡಗಿ ಪ್ರಣೀತಾ ತೆಲುಗು ಚಿತ್ರರಂಗಕ್ಕೆ ಜಿಗಿದಿದ್ದು ಗೊತ್ತೇ ಇದೆ. ತೆಲುಗಿನ ಬೇಡಿಕೆಯ ನಟ ಸಿದ್ಧಾರ್ಥ್ ಜೊತೆ 'ಬಾವಾ' ಎಂಬ ಚಿತ್ರದಲ್ಲಿ ಆಕೆ ನಟಿಸಿದ್ದಾರೆ. ಇನ್ನೇನು ತೆರೆಕಾಣಲು ಸಿದ್ಧವಾಗಿರುವ ಈ ಚಿತ್ರದಲ್ಲಿ ಸಖತ್ ಹಾಟ್ ದೃಶ್ಯವಿರುವುದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಸಿದ್ದಾರ್ಥ್ ಜೊತೆಗೆ ಪ್ರಣೀತಾ ಲಿಪ್ ಲಾಕ್ ಚುಂಬನ ದೃಶ್ಯವಿದ್ದು ಕೆಲ ಕ್ಷಣಗಳ ಕಾಲ ತೆರೆಯ ಮೇಲೆ ಮೂಡಿಬರಲಿದೆ. ಈ ಲಿಪ್ ಲಾಕ್ ಚುಂಬನ ದೃಶ್ಯ ಎರಡು ನಿಮಿಷಗಳಷ್ಟು ಸುದೀರ್ಘವಾಗಿತ್ತಂತೆ. ಕಾರಣಾಂತರಗಳಿಂದ ಬಳಿಕ ಈ ಚುಂಬನ ದೃಶ್ಯಕ್ಕೆ ಕತ್ತರಿ ಪ್ರಯೋಗಿಸಿ ಕೆಲ ಕ್ಷಣಗಳಿಗೆ ಸೀಮಿತಗೊಳಿಸಲಾಗಿದೆ ಎನ್ನುತ್ತವೆ ಮೂಲಗಳು.

ಈ ಹಿಂದೆ ಕಿಚ್ಚ ಸುದೀಪ್ ಚಿತ್ರದಲ್ಲಿ ನಟಿಸುವ ಅವಕಾಶ ಪ್ರಣೀತಾಗೆ ಜಸ್ಟ್ ಮಿಸ್ ಆಗಿತ್ತು. ಬಳಿಕ ಬಂದ 'ರಾಜಧಾನಿ' ಚಿತ್ರವನ್ನು ಸ್ವತಃ ಪ್ರಣೀತಾ ಅವರೆ ನಿರಾಕರಿಸಿದ್ದರು. 'ಬಾವಾ' ಚಿತ್ರದಲ್ಲಿ ಪ್ರಣೀತಾ ಅವರದು ಹಳ್ಳಿ ಹುಡುಗಿಯ ಪಾತ್ರ. 'ಬಾವಾ' ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕನ್ನಡದಲ್ಲಿ ಚುಂಬನ ದೃಶ್ಯಗಳಿಗೆ ನೋ ಎನ್ನುವ ತಾರೆಗಳು ಪರಭಾಷೆಗೆ ಹೋದಾಗ ಮಾತ್ರ ಅದ್ಯಾಕೋ ಏನೋ ತುಟಿ ಪಿಟಕ್ ಎನ್ನಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada