For Quick Alerts
  ALLOW NOTIFICATIONS  
  For Daily Alerts

  ಮತ್ತೆ ತೆರೆಯಲ್ಲಿ 'ಇಂತಿ ನಿನ್ನ ಪ್ರೀತಿಯ' ಸೋನು

  |

  ಸುಮಾರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಸೋನು ಗೌಡ, ಇದೀಗ ಸಾಕಷ್ಟು ಕಾಲದ ನಂತರ ಮತ್ತೊಮ್ಮೆ ಕನ್ನಡಿಗರಿಗೆ ದರ್ಶನ ನೀಡಲಿದ್ದಾರೆ. ಸೋನು ನಾಯಕಿಯಾಗಿ ಅಭಿನಯಿಸಿರುವ 'ಸ್ತ್ರೀ ಶಕ್ತಿ' ಚಿತ್ರ, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸಿಸಿಎಲ್ ನಲ್ಲಿ ಕರ್ನಾಟಕ ತಂಡದ ಪರ ಮಿಂಚಿದ್ದ ಆಟಗಾರ, ನಟ ರಾಜೀವ್ ಈ ಚಿತ್ರಕ್ಕೆ ನಾಯಕ.

  ಇಂತಿ ನಿನ್ನ ಪ್ರೀತಿಯ ಚಿತ್ರದ ನಂತರ ಸೋನು ಹೆಚ್ಚು ಕಡಿಮೆ ಮಾಯವೇ ಆಗಿದ್ದರು. ನಂತರ ಎರಡು ತಮಿಳು ಚಿತ್ರಗಳಲ್ಲಿ ನಟಿಸಿರುವ ಸೋನು, ಪೊಲೀಸ್ ಕ್ವಾಟ್ರಸ್ ಹಾಗೂ ಸಿಹಿಕನಸು ಎಂಬೆರಡು ಕನ್ನಡ ಚಿತ್ರಗಳಲ್ಲಿ ನಟಿಸಿ ಅಕ್ಷರಶಃ ಮರೆಯಾಗಿದ್ದರು. ನಂತರ ಮದುವೆಯಾದ ಅವರು ಮತ್ತೆ ಕಾಣಿಸಿಕೊಂಡಿದ್ದು 'ಲೈಫು ಇಷ್ಟೇನೆ' ಚಿತ್ರದಲ್ಲಿ ಮಾತ್ರ.

  ಆದರೆ ಈಗ, 'ಭ್ರೂಣ ಹತ್ಯೆ ತಡೆಯಿರಿ' ಎಂಬ ಸಂದೇಶ ಹೊತ್ತಿರುವ ಸ್ತ್ರೀ ಶಕ್ತಿ ಚಿತ್ರದಲ್ಲಿ ಸೋನು ಪೂರ್ಣ ಪ್ರಮಾಣದ ನಾಯಕಿ. ಏಪ್ರಿಲ್ ಮೊದಲ ವಾರದಲ್ಲಿ ಬಿಡಗಡೆ ಆಗಲಿರುವ ಈ ಚಿತ್ರವನ್ನು ಎಸ್ ವಿ ಸುರೇಶ್ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ, ನಟಿ ಸೋನು ತೆರೆಯ ಮೇಲೆ ಭ್ರೂಣ ಹತ್ಯೆ ತಡೆಯಿರಿ ಎನ್ನಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada Actress Sonu Gowda acted in the movie 'Sthree Shakthi', after a long gap. This movie releases on April 2012. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X