»   »  ಐ.ಪಿ.ಸಿ ಸೆಕ್ಷನ್ 300ಗೆ ಡಿಟಿಎಸ್ ಅಲಂಕಾರ

ಐ.ಪಿ.ಸಿ ಸೆಕ್ಷನ್ 300ಗೆ ಡಿಟಿಎಸ್ ಅಲಂಕಾರ

Subscribe to Filmibeat Kannada

ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ಆರ್.ಶಂಕರ್ ನಿರ್ಮಿಸುತ್ತಿರುವ 'ಐ.ಪಿ.ಸಿ ಸೆಕ್ಷನ್ 300 ಚಿತ್ರಕ್ಕೆ ಪ್ರಸಾದ್ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈತನಕ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿರುವ ಶಂಕರ್ ಅವರು ಪ್ರಥಮ ಬಾರಿಗೆ ಕಾನೂನಿಗೆ ಸಂಬಂಧಿಸಿದ ಕಥಾವಸ್ತುವನ್ನು ಆಯ್ದುಕೊಂಡಿದ್ದಾರೆ.

ಸಾಹಸದಿಂದ ಕೂಡಿದ ಅಥವಾ ಪ್ರೇಮವೇ ಪ್ರಧಾನವಾಗಿರುವ ಚಿತ್ರಗಳು ಈಗ ಹೆಚ್ಚಾಗಿ ಬರುತ್ತಿದೆ. ಹಾಗಾಗಿ ನಾನು ಈ ವಿಶಿಷ್ಟ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದ ನಿರ್ಮಾಪಕರು, ನಮ್ಮ ಚಿತ್ರ ಜನರ ಮನ್ನಣೆಗೆ ಪಾತ್ರವಾಗಲಿದೆ ಎಂದಿದ್ದಾರೆ.

ಕಿರುಚಿತ್ರಗಳನ್ನು ನಿರ್ದೆಶಿಸುತ್ತಿದ್ದ ಶಶಿಕಾಂತ್ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಹಿರಿತೆರೆಯನ್ನು ಪ್ರವೇಶಿಸಿದ್ದಾರೆ. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ವೀರಸಮರ್ಥ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿದೆ. ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಯತಿರಾಜ್, ಶಂಕರ್, ರವೀಂದ್ರನಾಥ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada